×
Ad

ಎಲ್ಲಾ ಪಾಕಿಸ್ತಾನೀಯರು ಭಯೋತ್ಪಾದಕರಲ್ಲ: ಬಾಬಾ ರಾಮ್ ದೇವ್

Update: 2017-06-18 17:04 IST

ಅಹ್ಮದಾಬಾದ್, ಜೂ.18: ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ ನಡೆಯುತ್ತಿದ್ದು, ಈ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಜೂ.21ರಂದು ನಡೆಯಲಿರುವ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಮಾತನಾಡಿರುವ ಯೋಗಗುರು ಬಾಬಾ ರಾಮ್ ದೇವ್, ತಾನು ಪಾಕಿಸ್ತಾನದಲ್ಲೂ ಯೋಗ ಪ್ರದರ್ಶನ ನೀಡಲು ಬಯಸಿದ್ದೇನೆ. ಅಲ್ಲಿ ಕಾರ್ಯಕ್ರಮ ನೀಡಲು ನನ್ನನ್ನು ಆಹ್ವಾನಿಸಲಾಗಿದೆ ಎಂದರು.

“ಪಾಕಿಸ್ತಾನದಲ್ಲಿ ಯೋಗ ಪ್ರದರ್ಶನ ನೀಡಲು ನನಗೆ ಆಹ್ವಾನ ಲಭಿಸಿದೆ. ಎಲ್ಲಾ ಪಾಕಿಸ್ತಾನಿಗಳು ಭಯೋತ್ಪಾದಕರಲ್ಲ. ನೆರೆಯ ದೇಶದ ಜನರು ಕೂಡ ಯೋಗ ಕಲಿಯಲು ಬಯಸುತ್ತಿದ್ದು, ಆದರೆ ಪಾಕಿಸ್ತಾನದಲ್ಲಿ ಪ್ರಸ್ತುತ ರಾಜಕೀಯ ಅಸ್ಥಿರತೆಯಿದೆ. ಇಲ್ಲದಿದ್ದಲ್ಲಿ ನಾನು ಅಲ್ಲಿಗೆ ಹೋಗುತ್ತಿದ್ದೆ” ಎಂದರು,

ಪಾಕಿಸ್ತಾನದಲ್ಲಿರುವ ಸಾಮಾನ್ಯ ಮನುಷ್ಯರು ಯಾರೂ ಕೆಟ್ಟವರಲ್ಲ. ಕೆಲವರು ಮಾತ್ರ ಭಯೋತ್ಪಾದನೆಯನ್ನು ಹರಡುತ್ತಿದ್ದಾರೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News