ಅರೆಸೇನಾ ಪಡೆಗಳ ಅಂಗವಿಕಲ ಸಿಬ್ಬಂದಿಗೆ ಪರಿಹಾರ ಮೊತ್ತ 20 ಲ.ರೂ.ಗೆ ಏರಿಕೆ

Update: 2017-06-18 12:53 GMT

ಹೊಸದಿಲ್ಲಿ,ಜೂ.18: ಕೇಂದ್ರ ಗೃಹಸಚಿವಾಲಯವು ಕಾರ್ಯಾಚರಣೆಗಳ ಸಂದರ್ಭ ದಲ್ಲಿ ಗಾಯಗೊಂಡು ಶೇ.100ರಷ್ಟು ಅಂಗವೈಕಲ್ಯಕ್ಕೆ ಗುರಿಯಾಗುವ ಅರೆಸೇನಾ ಪಡೆಗಳ ಸಿಬ್ಬಂದಿಗಳಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು 9 ಲ.ರೂ.ಗಳಿಂದ 20 ಲ.ರೂ.ಗಳಿಗೆ ಹೆಚ್ಚಿಸಿದೆ. ಈ ಆದೇಶವು 2016,ಜ.1ರಿಂದ ಪೂರ್ವಾನ್ವಯಗೊಂಡಿದೆ. ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿ ಈ ಏರಿಕೆಯನ್ನು ಮಾಡಲಾ ಗಿದೆ.

ಎಲ್ಲ ಕೇಂದ್ರ ಅರೆಸೇನಾ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್‌ಗೆ ಈ ಪರಿಹಾರ ಏರಿಕೆಯ ಲಾಭ ದೊರೆಯಲಿದೆ.ಶೇ.100ಕ್ಕೂ ಕಡಿಮೆ ಅಂಗವೈಕಲ್ಯ ಹೊಂದಿರುವ ಸಿಬ್ಬಂದಿಗಳಿಗೆ ಪರಿಹಾರದ ಮೊತ್ತವು ಅಂಗವೈಕಲ್ಯದ ಪ್ರಮಾಣಕ್ಕೆ ಅನುಗುಣವಾಗಿ ಕಡಿಮೆಯಾಗಬಹುದು ಎಂದು ಸಚಿವಾಲಯವು ತನ್ನ ಇತ್ತೀಚಿನ ಸುತ್ತೋಲೆಯಲ್ಲಿ ತಿಳಿಸಿದೆ.

ಗೃಹ ಸಚಿವಾಲಯದ ಅಧೀನದಲ್ಲಿ ಎಂಟು ಅರೆಸೇನಾ ಪಡೆಗಳ ಸುಮಾರು 10 ಲಕ್ಷ ಸಿಬ್ಬಂದಿಗಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News