ಕೊಲಂಬಿಯ ರಾಜಧಾನಿಯಲ್ಲಿ ಸ್ಫೋಟ: 3 ಸಾವು

Update: 2017-06-18 13:16 GMT

ಬೊಗೊಟ (ಕೊಲಂಬಿಯ), ಜೂ. 18: ಕೊಲಂಬಿಯದ ರಾಜಧಾನಿಯಲ್ಲಿರುವ ಅತ್ಯಂತ ನಿಬಿಡ ಶಾಪಿಂಗ್ ಸೆಂಟರೊಂದರಲ್ಲಿ ಶನಿವಾರ ಬಾಂಬೊಂದು ಸ್ಫೋಟಿಸಿದ್ದು ಮೂವರು ಮೃತಪಟ್ಟಿದ್ದಾರೆ ಹಾಗೂ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಬೊಗೊಟದ ಹೃದಯ ಭಾಗದಲ್ಲಿರುವ ‘ಸೆಂಟ್ರೊ ಆ್ಯಂಡಿನೊ’ದ ಎರಡನೆ ಮಹಡಿಯಲ್ಲಿರುವ ಮಹಿಳೆಯರ ವಿಶ್ರಾಂತಿ ಕೋಣೆಯಲ್ಲಿ ಸ್ಫೋಟ ಸಂಭವಿಸಿತು. ಸ್ಫೋಟದ ಬಳಿಕ ಅಲ್ಲಿಂದ ಜನರನ್ನು ತೆರವುಗೊಳಿಸಲಾಯಿತು.

ಇದೊಂದು ‘ಹೇಡಿತನದ ಭಯೋತ್ಪಾದಕ ಬಾಂಬ್ ಸ್ಫೋಟ’ ಎಂದು ಮೇಯರ್ ಎನ್ರಿಕ್ ಪೆನಲೊಸ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News