ಸೌಹಾರ್ದತೆಯ ಜೀವನ ಶೈಲಿ ಮುಖ್ಯ - ಫ್ರಾನ್ಸಿಸ್ ಆಸಿಸಿ ಡಿ ಅಲ್ಮೆಡಾ
ಪುತ್ತೂರು,ಜೂ.18: ಧರ್ಮವನ್ನು ರಾಜಕೀಯ, ಸ್ವಾರ್ಥಕ್ಕಾಗಿ ಬಳಸಬಾರದು. ಮನುಷ್ಯನಿಗೆ ಸೌಹಾರ್ದತೆಯ ಜೀವನ ಶೈಲಿ ಮುಖ್ಯ. ಎಲ್ಲಾ ಧರ್ಮಗಳು ಒಳ್ಳೆಯ ವಿಚಾರಗಳನ್ನೇ ಹೊರಸೂಸುತ್ತವೆ. ಅದನ್ನು ಅರಿತು ಕೊಂಡು ಬಾಳುವುದು ಮುಖ್ಯ. ಧರ್ಮ ಧರ್ಮದ ನಡುವೆ ಹುಳುಕು ಹುಡುಕುವ ಕೆಲಸದಲ್ಲಿ ಕಾಲ ಹರಣ ಮಾಡುವುದು ಒಳ್ಳೆಯದಲ್ಲ. ನಾವೆಲ್ಲರೂ ಮನುಷ್ಯರಾಗಿ ಬದುಕೋಣ ಎಂದು ಮರೀಲ್ ಚರ್ಚ್‌ನ ಧರ್ಮಗುರು ರೆ ಫಾ.ಫ್ರಾನ್ಸಿಸ್ ಅಸಿಸಿ ಡಿ ಅಲ್ಮೆಡಾ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ನೇತೃತ್ವದಲ್ಲಿ ಪುರಭವನದಲ್ಲಿ ರಂಜಾನ್ ಹಬ್ಬದ ಸೌಹಾರ್ದ ಸಂದೇಶ ಹಾಗೂ ಬೃಹತ್ ಇಫ್ತಾರ್ ಕೂಟದಲ್ಲಿ ಮಾತನಾಡಿದರು.
ರಂಜಾನ್ ಸೌಹಾರ್ದ ಸಂದೇಶ ಮತ್ತು ಧಾರ್ಮಿಕ ಮತ ಪ್ರಭಾಷಣ ಮಾಡಿದ ಕೆ.ಐ.ಸಿ ಕುಂಬ್ರ ಸಂಸ್ಥೆಯ ಪ್ರೊಫೆಸರ್ ಅನೀಸ್ ಕೌಸರಿಯವರು ಮಾತನಾಡಿ, ರಂಜಾನ್ ತಿಂಗಳು ಹೃದಯವನ್ನು ಜಯಿಸುವ ತಿಂಗಳು. ಭಾರತೀಯತೆ ಎಂಬ ಪದ ಕೋಮುವಾದವನ್ನು ದೂರ ಮಾಡುತ್ತದೆ. ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ಇಸ್ಲಾಂ ಸೇರಿದಂತೆ ಯಾವುದೇ ಧರ್ಮ ಭಯೋತ್ಪಾದನೆ, ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವುದಿಲ್ಲ. ಮನುಷ್ಯನಿಗೆ ಹೃದಯ ವಿಶಾಲತೆ ಮುಖ್ಯ ಎಂದರು.
ಇಫ್ತಾರ್ ಕೂಟದ ಸಂಯೋಜಕ, ಕಾವು ಹೇಮನಾಥ ಶೆಟ್ಟಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ನಾನು ವೈಯುಕ್ತಿಕ ಹಿತಾಸಕ್ತಿಯಿಂದ ನನ್ನ ಹಲವು ಆತ್ಮೀಯರ ಸಹಕಾರದೊಂದಿಗೆ ಪುತ್ತೂರಿನಲ್ಲಿ ಹಲವು ವರ್ಷಗಳಿಂದ ಇಫ್ತಾರ್ ಕೂಟವನ್ನು ಆಯೋಜಿಸುತ್ತಿದ್ದೇನೆ. ರಾಜಕೀಯ ಲಾಭಕ್ಕಾಗಿ ಈ ಕಾರ್ಯಕ್ರಮ ಆಗಬಾರದು. ಬದಲಾಗಿ ನಾಡಿನ ಸಾಮರಸ್ಯಕ್ಕಾಗಿ ಈ ಕಾರ್ಯಕ್ರಮ ಸಂಯೋಜಿಸುತ್ತಿದ್ದೇನೆ. ನಾವು ಮಾಡುವ ಕೆಲಸ ದೇವರ ಕೆಲಸ. ಇದರಲ್ಲಿ ಪ್ರೀತಿಯ ಸಂದೇಶ ಇದೆ ಎಂದು ಎಲ್ಲರಿಗೂ ರಂಜಾನ್ ಶುಭಾಶಯ ಹೇಳಿದರು.
ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ.ಜಗನ್ನಿವಾಸ್ ರಾವ್‌ರವರು ಮಾತನಾಡಿ ಕಾವು ಹೇiನಾಥ ಶೆಟ್ಟಿಯವರ ನೇತೃತ್ವದಲ್ಲಿ ಎಲ್ಲಾ ಧರ್ಮದವರನ್ನು ಸೇರಿಸಿ ಇಲ್ಲಿ ನಡೆದ ಇಫ್ತಾರ್ ಕೂಟ ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದರು.
ಬಡವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ, ಸನ್ಮಾನ
ಖಾದರ್ ಕೆನರರವರು ಕಾವು ಹೇಮನಾಥ ಶೆಟ್ಟಿಯವರ ಹೆಸರಿನಲ್ಲಿ ಸುಮಾರು 35 ಬಡ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಯು.ಟಿ.ತೌಸಿಫ್ ಉಪ್ಪಿನಂಗಡಿಯವರನ್ನು ಕಾವು ಹೇಮನಾಥ ಶೆಟ್ಟಿಯವರು ಸನ್ಮಾನಿಸಿದರು.
ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಆಕರ್ಷಣ್‌ನ ಕೆ.ಪಿ.ಅಹಮ್ಮದ್ ಹಾಜಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪ ಗೌಡ, ವಕೀಲರ ಸಂಘದ ಮಾಜಿ ಅಧ್ಯಕ್ಷ ದುರ್ಗಾಪ್ರಸಾದ್ ರೈ ಕುಂಬ್ರರವರು ರಂಜಾನ್ ಶುಭಾಶಂಸನೆ ಮಾಡಿದರು. ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯ ಹೆಚ್. ಮಹಮ್ಮದ್ ಆಲಿ, ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ರಾಜೀವಗಾಂಧಿ ಆರೋಗ್ಯ ವಿ.ವಿ. ಸಿಂಡಿಕೇಟ್ ಸದಸ್ಯ ಡಾ.ರಘ, ತಾ.ಪಂ ಸದಸ್ಯ ಪರಮೇಶ್ವರ ಭಂಡಾರಿ, ಕೆದಂಬಾಡಿ ಗ್ರಾ.ಪಂ ಸದಸ್ಯ ಬೊಳೋಡಿ ಚಂದ್ರಹಾಸ ರೈ, ಕೆಯ್ಯೂರು ಗ್ರಾ.ಪಂ. ಸದಸ್ಯ ಎ.ಕೆ.ಜಯರಾಮ ರೈ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಪ್ರಮುಖರಾದ ನಝೀರ್ ಮಠ, ಮಹಮ್ಮದ್ ಕುಂಞಿ ಕೂಟತ್ತಾನ, ಸಮದ್ ಸೋಂಪಾಡಿ, ಶಕೂರ್ ಹಾಜಿ, ಸಾಬಾ ಸಾಹೇಬ್ ಪಾಲ್ತಾಡ್, ಇಬ್ರಾಹಿಂ ಮುಲಾರ್, ಎ.ಬಿ.ವೇಗಸ್, ಅಬ್ದುಲ್ ಖಾದರ್ ಮೇರ್ಲ, ನ್ಯಾಯವಾದಿ ನಝೀರ್ ಬೆದ್ರೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರ
ು. ಕೆ.ಎಂ.ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.