ಮೋಟಾರ್ ಬೈಕ್ ರೇಸ್ ಸ್ಟಿಂಟ್ ಫೆಸ್ಟ್-2017
Update: 2017-06-18 20:55 IST
ಪುತ್ತೂರು,ಜು.18: ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಮೋಟಾರ್ ಬೈಕ್ ರೇಸ್ ನಗರದ ಹೊರವಲಯದ ಆರ್ಯಾಪು ಗ್ರಾಮದ ಬಂಗಾರಡ್ಕ ಎಂಬಲ್ಲಿ ಭಾನುವಾರ ನಡೆಯಿತು.
ಶಾಸಕಿ ಶಕುಂತಳಾ ಶೆಟ್ಟಿ ರೇಸ್‌ಗೆ ಚಾಲನೆ ನೀಡಿ ಶುಭ ಹಾರೈಸಿದರು.
ಬಂಗಾರಡ್ಕದಿಂದ ಪಿಲಿಗುಂಡ ಎಂಬಲ್ಲಿಯ ತನಕ ಮಣ್ಣು ರಸ್ತೆಯಲ್ಲಿ ರೇಸ್ ನಡೆಯಿತು. ಸಂಪ್ಯ ಠಾಣಾಧಿಕಾರಿ ಅಬ್ದುಲ್ ಖಾದರ್, ಪುತ್ತೂರು ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕುಂಜೂರು ದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಹಾಬಲ ರೈ ಒಳತ್ತಡ್ಕ, ಪುತ್ತೂರು ಕ್ಲಬ್ ಅಧ್ಯಕ್ಷ ಡಾ. ದೀಪಕ್ ರೈ, ಮೋಟಾರ್ ರೇಸ್‌ನ ಸಂಯೋಜಕ ಆಶಾಕ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.