ಜಾಫರ್ ಖಾನ್ ಸಾವು ದುರದೃಷ್ಟಕರ: ವಸುಂಧರಾ ರಾಜೆ

Update: 2017-06-18 16:08 GMT

ಹೊಸದಿಲ್ಲಿ, ಜೂ.18: ಪ್ರತಾಪ್‌ಗಢದಲ್ಲಿ ಸರಕಾರಿ ಅಧಿಕಾರಿಗಳಿಂದ ನಡೆದ ಸಾಮಾಜಿಕ ಕಾರ್ಯಕರ್ತ ಜಾಫರ್ ಖಾನ್ ಹತ್ಯೆ ದುರದೃಷ್ಟಕರ ಎಂದು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ರವಿವಾರ ಹೇಳಿದ್ದಾರೆ.

ಬಯಲು ಶೌಚ ಮಾಡುತ್ತಿದ್ದ ಪತ್ನಿ, ಪುತ್ರಿ ಹಾಗೂ ಮಹಿಳೆಯರ ಫೋಟೋವನ್ನು ಸ್ಪಚ್ಛ ಭಾರತ್ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದ ಅಧಿಕಾರಿಗಳು ತೆಗೆಯುವುದನ್ನು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಜಾಫರ್ ಖಾನ್‌ ರನ್ನು ಅಧಿಕಾರಿಗಳು ಹೊಡೆದು ಕೊಂದಿದ್ದರು. ಜಾಫರ್ ಖಾನ್‌ನ ಸಹೋದರ ನಗರಾಡಳಿತ ಆಯುಕ್ತ ಅಶೋಕ್ ಜೈನ್ ಸೇರಿದಂತೆ ಹಲವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, "ಖಾನ್ ಸಾವಿಗೆ ನಾನು ಹಾಗೂ ನನ್ನ ಸಹವರ್ತಿಗಳು ಕಾರಣರಲ್ಲ" ಎಂದು ಜೈನ್ ಹೇಳಿದ್ದಾರೆ.

ಪ್ರತಾಪ್‌ಗಢದಲ್ಲಿ ಸಂಭವಿಸಿರುವ ಜಾಫರ್ ಖಾನ್ ಸಾವು ದುರದೃಷ್ಟಕರ. ಈ ಬಗ್ಗೆ ತನಿಖೆ ನಡೆಯುತ್ತಿದೆ. ನ್ಯಾಯ ಗೆಲ್ಲಲಿದೆ ಎಂದು ವಸುಂಧರಾ ರಾಜೆ ರವಿವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News