×
Ad

ಅಫ್ಘಾನ್: 2 ಪಾಕ್ ಅಧಿಕಾರಿಗಳು ನಾಪತ್ತೆ

Update: 2017-06-18 21:52 IST

ಇಸ್ಲಾಮಾಬಾದ್, ಜೂ. 18: ಅಫ್ಘಾನಿಸ್ತಾನದ ಜಲಾಲಾಬಾದ್ ಪ್ರಾಂತದಲ್ಲಿರುವ ತನ್ನ ಕಾನ್ಸುಲೇಟ್‌ನ ಇಬ್ಬರು ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಎಂದು ಪಾಕಿಸ್ತಾನ ರವಿವಾರ ಹೇಳಿದೆ.

ಅವರು ಜೂನ್ 16ರಂದು ರಸ್ತೆ ಮೂಲಕ ಸ್ವದೇಶಕ್ಕೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

 ತನ್ನ ಅಧಿಕಾರಿಗಳನ್ನು ಶೀಘ್ರ ಪತ್ತೆಹಚ್ಚಲು ಹಾಗೂ ಈ ಹೀನ ಕೃತ್ಯಗೈದವರನ್ನು ಶಿಕ್ಷಿಸಲು ಅಫ್ಘಾನಿಸ್ತಾನ ಸರಕಾರ ಕ್ಷಿಪ್ರ ಪ್ರಯತ್ನಗಳನ್ನು ನಡೆಸಬೇಕೆಂದು ಪಾಕಿಸ್ತಾನ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News