ಉಡುಪಿ: ಗ್ರಾಪಂನ 4 ಸ್ಥಾನಗಳಿಗೆ ಚುನಾವಣೆ

Update: 2017-06-18 16:23 GMT

ಉಡುಪಿ, ಜೂ.18: ಜಿಲ್ಲೆಯ ಕುಂದಾಪುರ ಹಾಗೂ ಉಡುಪಿ ತಾಲೂಕಿನಲ್ಲಿ ವಿವಿಧ ಕಾರಣಗಳಿಂದ ತೆರವಾದ 4 ಗ್ರಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆಯನ್ನು ಘೋಷಿಸಲಾಗಿದೆ.ಈ ನಾಲ್ಕೂ ಸ್ಥಾನಗಳಿಗೆ ಜು.2ರಂದು ಮತದಾನ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಪಂನ ಹೊಸಂಗಡಿ-2(ಹಿಂದುಳಿದ ವರ್ಗ ಬ), ಜಡ್ಕಲ್ ಗ್ರಾಪಂನ ಮುದೂರು-1 (ಸಾಮಾನ್ಯ ಮಹಿಳೆ) ಕ್ಷೇತ್ರ ಹಾಗೂ ಉಡುಪಿ ತಾಲೂಕಿನ ಚೇರ್ಕಾಡಿ ಗ್ರಾಪಂನ ಚೇರ್ಕಾಡಿ-6 (ಪರಿಶಿಷ್ಟ ಪಂಗಡ) ಮತ್ತು ಕೋಟೆ ಗ್ರಾಪಂನ ಮಟ್ಟು-1 (ಸಾಮಾನ್ಯ) ಕ್ಷೇತ್ರಗಳಲ್ಲಿ ತೆರವಾಗಿರುವ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ.

ಈ ನಾಲ್ಕು ಸ್ಥಾನಗಳಿಗೆ ನಾಮಪತ್ರ ಸ್ವೀಕಾರ ಶನಿವಾರದಿಂದ ಪ್ರಾರಂಭ ಗೊಂಡಿದೆ. ಮೊದಲ ದಿನದಂದು ಚೇರ್ಕಾಡಿ ಮತ್ತು ಕೋಟೆ ಗ್ರಾಪಂ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರವನ್ನು ಸ್ವೀಕರಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News