×
Ad

ಐತಪ್ಪರ ಕೊಲೆ ಯತ್ನ: ಆರೋಪಿಗೆ ಜಾಮೀನು

Update: 2017-06-18 22:11 IST

ಮಂಗಳೂರು, ಜೂ. 18: ಎರಡು ತಿಂಗಳ ಹಿಂದೆ ಉರ್ವ ಪೊಲೀಸ್ ಠಾಣೆಯ ಎಎಸ್‌ಐ ಐತಪ್ಪ (55) ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಪ್ರಕರಣದ ಆರೋಪಿ ಮುಹಮ್ಮದ್ ನಿಯಾಝ್ (20) ಎಂಬಾತನಿಗೆ ಮಂಗಳೂರಿನ 3ನೆ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿದೆ.

ಎ.5ರಂದು ಐತಪ್ಪ ಅವರು ದ್ವಿಚಕ್ರ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಲೇಡಿಹಿಲ್ ವೃತ್ತದಲ್ಲಿ ಇಬ್ಬರು ಅಪರಿಚಿತರು ರಾಡ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತೀವ್ರ ಗಾಯಗೊಂಡ ಐತಪ್ಪರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿಯ ಪರವಾಗಿ ದಿನೇಶ್ ಹೆಗ್ಡೆ ಉಳೇಪಾಡಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News