ಕಲ್ಲಾಪು: ಯುವಕನಿಗೆ ಚೂರಿ ಇರಿತ
ಉಳ್ಳಾಲ, ಜೂ. 18: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಮುಡಿಪೋಡಿ ಎಂಬಲ್ಲಿ ಆಟವಾಡುವ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಬಳಿಕ ಯುವಕನೊರ್ವ ತನ್ನ ನೆರೆಮನೆಯ ಯುವಕನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ರವಿವಾರ ಸಂಜೆ ಸಂಭವಿಸಿದೆ.
ಕಲ್ಲಾಪು ಮುಡಿಪೋಡಿ ನಿವಾಸಿ ಶ್ರಾವಣ್ (18) ಗಾಯಗೊಂಡವರು ಎಂದು ಗುರುತಿಸಲಾಗಿದೆ. ನೆರೆಮನೆಯ ಮುಝಫರ್ ಎಂಬಾತ ಚೂರಿಯಿಂದ ಇರಿದು ಗಾಯಗೊಳಿಸಿದ ವ್ಯಕ್ತಿ ಎಂದು ತಿಳಿದುಬಂದಿದೆ.
ಘಟನೆ ವಿವರ: ಕಲ್ಲಾಪು ಸಮೀಪ ಮೈದಾನದಲ್ಲಿ ಕ್ರಿಕೆಟ್ ಆಡವಾಡುವ ಸಂದರ್ಭ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಆಟ ಮುಗಿದ ಬಳಿಕ ಮನೆ ಕಡೆಗೆ ತೆರಳುವ ಸಂದರ್ಭ ಮುಝಫರ್ ಎಂಬಾತ ಶ್ರಾವಣ್ ನ ಬೆನ್ನಿನ ಭಾಗಕ್ಕೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ ಎಂದು ತಿಳಿದುಬಂದಿದೆ. ಗಾಯಗೊಂಡ ಶ್ರವಣ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಗೊಂಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.