ಅಭಿನಂದನೆ ಕಾರ್ಯಕ್ರಮ
Update: 2017-06-18 23:45 IST
ಮಂಗಳೂರು, ಜೂ.18: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಪುತ್ತೂರು ಘಟಕ ಇವರ ಸಹಕಾರದೊಂದಿಗೆ ಜೂನ್ 24 ರಂದು ಅಪರಾಹ್ನ 2.30ಕ್ಕೆ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಎಸೆಸೆಲ್ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ವಿಶೇಷ ಸಾಧನೆ ಮಾಡಿದ ಶಾಲೆಗಳಿಗೆ ಅಭಿನಂದನೆ ನಡೆಯಲಿದ್ದು, ಶಾಸಕಿ ಶಕುಂತಳಾ ಟಿ.ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.