×
Ad

ರಿಯಾಝ್ ಮೌಲವಿ ಕೊಲೆ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಕೆ

Update: 2017-06-19 17:30 IST

ಕಾಸರಗೋಡು,ಜೂ.19 : ಮದ್ರಸ ಶಿಕ್ಷಕ ರಿಯಾಝ್ ಮೌಲವಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ರೈಮ್ ಬ್ರಾಂಚ್ ಪೊಲೀಸರು  ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯದಲ್ಲಿ  ಸೋಮವಾರ ದೋಷಾರೋಪ ಪಟ್ಟಿ ಸಲ್ಲಿಸಿದರು.

ಕ್ರೈಮ್ ಬ್ರಾಂಚ್  ಎಸ್ಪಿ ಡಾ.ಎ.ಶ್ರೀನಿವಾಸ್, ಸರ್ಕಲ್ ಇನ್ಸ್ ಪೆಕ್ಟರ್  ಪಿ.ಕೆ ಸುಧಾಕರನ್ ನೇತೃತ್ವದ ತಂಡವು ದೋಷಾರೋಪ ಪಟ್ಟಿ ಸಲ್ಲಿಸಿತು. 

ಕಾಸರಗೋಡಿನಲ್ಲಿ ಕೋಮು ಗಲಭೆ ಸ್ರಷ್ಟಿಸುವ ಉದ್ದೇಶ ತಂಡದಾಗಿತ್ತು. ಕೃತ್ಯದಲ್ಲಿ ಸಂಚು ನಡೆದಿದೆ ಎಂಬ ಬಗ್ಗೆ  ಯಾವುದೇ ಸುಳಿವು ಲಭಿಸಿಲ್ಲ ಎಂದು   ತನಿಖಾಧಿಕಾರಿಗಳು ತಿಳಿಸಿದ್ದಾರೆ. 

ಕೋಮು ದ್ವೇಷ ಕೆರಳಿಸುವ ದುಷ್ಕೃತ್ಯಗಳಿಗೆ 153 ಎ ಸೆಕ್ಷನ್ ಪ್ರಕಾರ ಮೊಕದ್ದಮೆ  ದಾಖಲಿಸಲಾಗಿದೆ. ಅನುಮತಿ ಇಲ್ಲದೆ   ಅತಿಕ್ರಮಣ , ಕೊಲೆ , ಆರಾಧನಾಲಯ ಮಲಿನ,  ಸಾಕ್ಷ್ಯನಾಶ, ಶಿಕ್ಷಾ ಕಾಯ್ದೆ ಅಲ್ಲದೆ,  ಕೋಮುಗಲಭೆಗೆ ಹುನ್ನಾರ  ಮೊದಲಾದ ಶಿಕ್ಷಾ ಕಾಯ್ದೆಯನ್ನು  ಹೂಡಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟoತೆ 137 ಮಂದಿಯಿಂದ ಸಾಕ್ಷಿ ಮಾಡಲಾಗಿದೆ. ಇದರಲ್ಲಿ 100 ಮಂದಿಯನ್ನು ಸಾಕ್ಷಿಯಾಗಿ ಗುರುತಿಸಲಾಗಿದೆ . ಒಂದು ಸಾವಿರ ಪುಟ ಹೊಂದಿರುವ  ಆರೋಪ ಪಟ್ಟಿ , 45 ದಾಖಲೆ , 50  ವಸ್ತ್ರ , ಮಾರಕಾಯುಧದಿಂದ ಸಾಮಾಗ್ರಿಗಳನ್ನು  ಆರೋಪ ಪಟ್ಟಿಯಲ್ಲಿ  ಸೇರಿಸಲಾಗಿದ್ದು , ಇವುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವೈಜ್ಞಾನಿಕ ತಪಾಸಣಾ, ಡಿಎನ್ಎ ವರದಿಗಳನ್ನು  ಹಾಜರು ಪಡಿಸಲಾಗಿದೆ 

ಮಾರ್ಚ್ 21ರಂದು ರಾತ್ರಿ ಮದ್ರಸ ಅಧ್ಯಾಪಕ ರಿಯಾಝ್ ಮೌಲವಿಯವರನ್ನು ಹಳೆ ಸೂರ್ಲುವಿನಲ್ಲಿರುವ ಅವರ ವಾಸಸ್ಥಳದಲ್ಲಿ  ಕೊಚ್ಚಿ ಕೊಲೆಗೈಯ್ಯ ಲಾಗಿತ್ತು. ಕೃತ್ಯಕ್ಕೆ ಸಂಬಂಧಪಟ್ಟಂತೆ ಕೇಳುಗುಡ್ಡೆ  ಅಯ್ಯಪ್ಪಭಜನಾ ಮಂದಿರ ಸಮೀಪದ  ಅಜೇಶ್ ಯಾನೆ ಅಪ್ಪು, ಕೇಳುಗುಡ್ಡೆಯ ನಿತಿನ್ ಮತ್ತು ಕೇಳುಗುಡ್ಡೆ ಗಂಗೈ ರಸ್ತೆಯ  ಅಖಿಲೇಶ್ ನನ್ನು  ವಿಶೇಷ ತನಿಖಾ ತಂಡ ಬಂಧಿಸಿತ್ತು. ಅವರು ಈಗ  ಕಣ್ಣೂರು ಸೆಂಟ್ರಲ್ ಜೈಲ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಪ್ರಕರಣದ ವಿಚಾರಣೆ ಶೀಘ್ರ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ  ಖ್ಯಾತ ನ್ಯಾಯವಾದಿ ಎಂ. ಅಶೋಕನ್‌ರನ್ನು ರಾಜ್ಯ ಸರಕಾರ ಸ್ಪೆಷಲ್  ಪಬ್ಲಿಕ್ ಪ್ರಾಸಿಕ್ಯೂಟರ್ನ್ನಾಗಿ ನೇಮಿಸಿ ಆದೇಶ ಹೊರಡಿ ಸಿದೆ. ಈ ಪ್ರಕರಣ ವಾದಿಸಲು ಸ್ಪೆಷಲ್ ಪಬ್ಲಿಕ್ ಪ್ರಾಸಿ ಕ್ಯೂಟರ್ ನೇಮಿಸಬೇಕೆಂದು ಆಗ್ರಹಿಸಿ ಜಮಾಅತ್ ಸಮಿತಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿತ್ತು. ಅದರಂತೆ ಸರಕಾರ ಈ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News