×
Ad

ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆ ಕ್ಯಾಶ್ ಲೆಸ್ ಅಲ್ಲ!: ವಿವರಗಳಿಗೆ ಕ್ಲಿಕ್ ಮಾಡಿ

Update: 2017-06-19 18:01 IST

ಹೊಸದಿಲ್ಲಿ, ಜೂ.19: ನೋಟು ಅಮಾನ್ಯೀಕರಣದ ನಂತರ ಕೇಂದ್ರ ಸರಕಾರ ಡಿಜಿಟಲೀಕರಣ ಎನ್ನುತ್ತಿದ್ದರೆ ಇತ್ತ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವರು ಕ್ಯಾಶ್ ರೂಪದಲ್ಲಿ 15 ಸಾವಿರ ರೂ. ಪಾವತಿ ಮಾಡಬೇಕಾಗಿದೆ,

ನಾಮಪತ್ರ ತುಂಬುವ ಸಂದರ್ಭ ರಿಟರ್ನಿಂಗ್ ಅಧಿಕಾರಿಗೆ ಈ ಮೊತ್ತವನ್ನು ನಗದಿನ ರೂಪದಲ್ಲಿ ಪಾವತಿಸಬೇಕು ಎಂದು ನಿಯಮ ಹೇಳುತ್ತದೆ. ಅಭ್ಯರ್ಥಿಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ ಹಣ ಪಾವತಿಸಬಹುದಾಗಿದೆ. ಇದರ ಹೊರತು ಚೆಕ್ ಅಥವಾ ಡಿಜಿಟಲ್ ಟ್ರಾನ್ಸಾಕ್ಷನ್ ಮೂಲಕ ಹಣ ಪಾವತಿ ಮಾಡಲು ಸಾಧ್ಯವಿಲ್ಲ.

ಜುಲೈ 17ರಂದು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 20ರಂದು ಮತ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News