ಸಮಸ್ತ ಪಬ್ಲಿಕ್ ಪರೀಕ್ಷೆ: ಕೋಡಿಂಬಾಡಿ ಮದ್ರಸಕ್ಕೆ ಶೇ.100 ಫಲಿತಾಂಶ
ಪುತ್ತೂರು,ಜೂ.19 : ಸಮಸ್ತ ಶಿಕ್ಷಣ ಮಂಡಳಿ ಮೇ ತಿಂಗಳಲ್ಲಿ ನಡೆಸಿದ ವಾರ್ಷಿಕ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಕೋಡಿಂಬಾಡಿ ನೂರುಲ್ ಹುದಾ ಮದ್ರಸಕ್ಕೆ ಶೇ.100 ಫಲಿತಾಂಶ ಬಂದಿದೆ.
ಐದು ಮತ್ತು ಏಳನೇ ತರಗತಿಯಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಏಳನೆಯ ತರಗತಿಯ ಮೂರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದರೆ ಉಳಿದವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ, ಮದ್ರಸಕ್ಕೆ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಬಂದಿದೆ.
ಏಳನೇ ತರಗತಿಯ ವಿದ್ಯಾರ್ಥಿನಿಯರಾದ ಇಶ್ರತ್ ( ಶಾಂತಿನಗರ ಅಬ್ದುಲ್ ಖಾದರ್ ಅವರ ಪುತ್ರಿ) ,ಶಮಾ (ಅಬೂಬಕ್ಕರ್ ಸರ್ಗ ಅವರ ಪುತ್ರಿ) ಮತ್ತು ಶೈಮಾ (ಅಬೂಬಕ್ಕರ್ ಸರ್ಗ ಅವರ ಪುತ್ರಿ) ಇವರು ಡಿಸ್ಟಿಂಕ್ಷನ್ ಪಡೆದಿದ್ದು, ಹಾಗೂ ಪುತ್ತೂರು ರೇಂಜ್ ಮಟ್ಟದಲ್ಲಿ ಅನುಕ್ರಮವಾಗಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಎಂದು ಮದ್ರಸ ಪ್ರಧಾನ ಅಧ್ಯಾಪಕ ಕೆ.ಎಂ.ಎ.ಕೊಡುಂಗಾಯಿ, ಜಮಾಅತ್ ಅಧ್ಯಕ್ಷ ಯೂಸೂಫ್ ಕರ್ನಾಟಕ ಹಾಗೂ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಂಬಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.