ಪೆರ್ಣಂಕಿಲ ಬಡಕುಟುಂಬಕ್ಕೆ ಮನೆ ಹಸ್ತಾಂತರ

Update: 2017-06-19 12:49 GMT

ಹಿರಿಯಡಕ, ಜೂ.19: ದೇವಾಡಿಗ ಸಮಾಜದ ಯುವಕರ ತಂಡ ಸಾಮಾ ಜಿಕ ಜಾಲತಾಣದ ಮೂಲಕ ಸಂಗ್ರಹಿಸಿದ 3,41,800ರೂ. ಮತ್ತು ಕೊಡಿ ಬೆಟ್ಟು ಗ್ರಾಪಂನಿಂದ ಮಂಜೂರಾದ 1.2 ಲಕ್ಷ ರೂ.ನಲ್ಲಿ ನಿರ್ಮಿಸಲಾದ ಮನೆ ಯನ್ನು ಕೊಡಿಬೆಟ್ಟು ಗ್ರಾಪಂ ವ್ಯಾಪ್ತಿಯ ಪೆರ್ಣಂಕಿಲದ ಸುಮಂಗಳ ಕುಟುಂಬಕ್ಕೆ ಇಂದು ಹಸ್ತಾಂತರಿಸಲಾಯಿತು.

ಸುಮಂಗಳ ಹಾಗೂ ಅವರ ಎರಡು ಮಕ್ಕಳನ್ನೊಳಗೊಂಡ ಬಡ ಕುಟುಂಬ ಗುಡಿಸಿಲಿನಲ್ಲಿ ವಾಸವಾಗಿರುವುದನ್ನು ಕಂಡ ದೇವಾಡಿಗ ಸಮಾಜದ ಯುವಕರು, ಸಾಮಾಜಿಕ ಜಾಲ ತಾಣದ ಮೂಲಕ ಸಮಾಜ ಬಾಂಧವರನ್ನು ಮತ್ತು ಸಮಾಜದ ವಿವಿಧ ಸಂಘಟನೆಗಳನ್ನು ಸಂಪರ್ಕಿಸಿ ಸುಮಂಗಳ ಕುಟುಂಬಕ್ಕೆ ಉತ್ತಮ ಮನೆ ನಿರ್ಮಿಸಿಕೊಟ್ಟಿದೆ.

 ಇಂದು ನಡೆದ ಮನೆಯ ಗೃಹಪ್ರವೇಶದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ದುಬೈ ದೇವಾಡಿಗ ಸಂಘದ ಹಿರಿಯ ಸದಸ್ಯರಾದ ಆನಂದ ದೇವಾಡಿಗ, ರಮೇಶ ದೇವಾಡಿಗ ಮತ್ತು ಉಡುಪಿಯ ಶ್ರೀಧರ ದೇವಾಡಿಗ ದೀಪ ಬೆಳಗಿುವ ಮೂಲಕ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಉಡುಪಿಯ ಜೀವರತ್ನ ದೇವಾಡಿಗ, ಮಂಜುನಾಥ ದೇವಾಡಿಗ, ಶ್ರೀನಿವಾಸ ದೇವಾಡಿಗ, ಚಂದ್ರಕಾಂತ ದೇವಾಡಿಗ, ಮಂಗಳೂರಿನ ಕರುಣಾಕರ ಎಂ.ಎಚ್., ಹಿರಿಯಡಕ ಉಪ ಸಂಘದ ನಿಕಟಪೂರ್ವ ಅಧ್ಯಕ್ಷ ನಾರಾಯಣ ಶೇರಿಗಾರ್, ದೇವಾಡಿಗ ಯುವ ವೇದಿಕೆ ಅಧ್ಯಕ್ಷ ಪ್ರಭಾಕರ ದೇವಾಡಿಗ, ರಾಕೇಶ್ ದೇವಾಡಿಗ, ಪ್ರತೀಕ್ ದೇವಾಡಿಗ, ಪ್ರಕಾಶ್ ದೇವಾಡಿಗ, ದುಬೈ ರಾಜೇಶ ದೇವಾಡಿಗ ಉಪಸ್ಥಿತರಿದ್ದರು. ಮನೆ ನಿರ್ಮಾಣಕ್ಕೆ ರಾಘ ವೇಂದ್ರ ಜಿ. ಹಿರಿಯಡಕ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News