ಸರಕಾರಿ ಕಾಲೇಜುಗಳ ಪ್ರಾಂಶುಪಾಲರ ಸಭೆ

Update: 2017-06-19 13:06 GMT

ಮಂಗಳೂರು, ಜೂ.19: ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ, ಮಂಗಳೂರು ವಲಯ ಹಾಗೂ ಡಾ. ಪಿ. ದಯಾನಂದ ಪೈ ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಉಡುಪಿ, ದ.ಕ. ಹಾಗೂ ಕೊಡಗು ಜಿಲ್ಲೆಯ ವಿವಿಧ ಸರಕಾರಿ ಕಾಲೇಜುಗಳ ಪ್ರಾಂಶುಪಾಲರು ಹಾಗೂ ನ್ಯಾಕ್/ಐಕ್ಯೂಎಸಿ ಸಂಯೋಜಕರ ಸಭೆ ಜರಗಿತು.

  ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಉದಯಶಂಕರ್ ಉದ್ಘಾಟಿಸಿ, ಕಾಲೇಜಿನ ಎಲ್ಲ ಉಪನ್ಯಾಸಕರು ಒಂದು ತಂಡವಾಗಿ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು. ಪ್ರಾಂಶುಪಾಲರು ವಹಿಸಿದಂತಹ ವಿವಿಧ ಸಮಿತಿಗಳ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಹಾಗೂ ಪ್ರಾಮಾಣಿಕವಾಗಿ ನಿಭಾಯಿಸಬೇಕು. ಕಾಲೇಜಿನಲ್ಲಿ ನಡೆಯುವ ಪ್ರತಿಯೊಂದು ಕೆಲಸ ಕಾರ್ಯಗಳ ಸಂಪೂರ್ಣ ದಾಖಲೆಗಳನ್ನು ಐಕ್ಯೂಎಸಿ ಸಂಯೀಜಕರು ನಿರ್ವಹಿಸಬೇಕು. ಆಗ ಮಾತ್ರ ಸರಕಾರಿ ಕಾಲೇಜುಗಳ ಗುಣಮಟ್ಟವನ್ನು ಖಾಸಗಿ ಕಾಲೇಜುಗಳಿಗಿಂತ ಉತ್ತಮವಾಗಿಸಬಹುದು ಎಂದರು.

ವೇದಿಕೆಯಲ್ಲಿ ಉಡುಪಿ ವಲಯದ ಲೀಡ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಹೆಗ್ಡೆ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಶಶಿಧರ್ ಉಪಸ್ಥಿತರಿದ್ದರು.

 ದ.ಕ. ಲೀಡ್ ಪ್ರಾಂಶುಪಾ ಪ್ರೊ.ರಾಜಶೇಕರ್ ಹೆಬ್ಬಾರ್ ಸಿ. ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಪ್ರಕಾಶ್‌ಚಂದ್ರ ಬಿ. ವಂದಿಸಿದರು. ಸಂಯೋಜಕ ಡಾ. ನವೀನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News