ಜೂ.21: ಮಹಿಳೆಯರಿಗಾಗಿ ಸ್ಕೂಲ್ ಆಫ್ ಕುರ್‌ಆನ್ ಆರಂಭ
Update: 2017-06-19 18:43 IST
ಮಂಗಳೂರು, ಜೂ.19: ತ್ವೈಬಾ ನಾಲೆಡ್ಜ್ ಸೆಂಟರ್ ಉಳ್ಳಾಲ ಇದರ ಅಧೀನದಲ್ಲಿ ಮಹಿಳೆಯರಿಗೆ, ಮಹಿಳೆಯರು ಕಲಿಸುವ ಸ್ಕೂಲ್ ಆಪ್ ಕುರ್‌ಆನ್ ಜೂ.21ರಂದು ಬೆಳಗ್ಗೆ 10ಕ್ಕೆ ತ್ವೈಬಾ ಮಹಿಳಾ ಶರೀಅತ್ ಕಾಲೇಜಿನಲ್ಲಿ ಉದ್ಘಾಟನೆಗೊಳ್ಳಲಿದೆ.
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಸಅದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಳ್ಳಾಲ ತ್ವೈಬಾ ಮಹಿಳಾ ಶರೀಅತ್ ಕಾಲೇಜಿನ ಉಪನ್ಯಾಸಕಿ ಸುಹೈಲಾ ಫಾತಿಮಾ ಮುಕ್ಕಚೇರಿ ತರಗತಿ ನಡೆಸಲಿದ್ದಾರೆ.
ಪ್ರತೀ ರವಿವಾರ ಬೆಳಗ್ಗೆ 7ಕ್ಕೆ ನಡೆಯಲಿದೆ. ಆಸಕ್ತ ಮಹಿಳೆಯರು ಮೊ.ಸಂ. 7760053572 ಅಥವಾ 7996026323ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.