ಎಂಡೋ ಸಂತ್ರಸ್ತರ ಜೊತೆ ಎಸ್‌ಐಒ ಇಫ್ತಾರ್ ಸ್ನೇಹ ಸಮ್ಮಿಲನ

Update: 2017-06-19 13:17 GMT

ಮಂಗಳೂರು, ಜೂ.19: ಎಸ್‌ಐಒ ಪಾಣೆಮಂಗಳೂರು ಮತ್ತು ಉಪ್ಪಿನಂಗಡಿ ಶಾಖೆಯು ಜಂಟಿ ಆಶ್ರಯದಲ್ಲಿ ಕೊಯ್ಲ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರದಲ್ಲಿ ಇಫ್ತಾರ್ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನೇತ್ರಾವತಿ ಉಳಿಸಿ ಹೋರಾಟ ಸಮಿತಿಯ ಮುಖಂಡ ಡಾ. ನಿರಂಜನ್ ರೈ ಇಂದು ಮಾತನಾಡುವವರು ಹೆಚ್ಚಾಗಿದ್ದಾರೆ. ಆದರೆ ಜನರ ನೋವು ಸಮಸ್ಯೆಗಳಿಗೆ ಹೆಚ್ಚಾಗಬೇಕಾಗಿದೆ. ಈ ನಿಟ್ಟಿನಲ್ಲಿ ಯುವಕರು ಮುಂದೆ ಬರಬೇಕು ಎಂದರು.

 ಆಯಿಶಾ ಎಜುಕೇಶನಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಅಮೀನ್ ಅಹ್ಸನ್, ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕರುಣಾಕರ್ ಹಾಗೂ ನೆಲ್ಯಾಡಿ ಸರಕಾರಿ ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿ, ಎಸ್‌ಐಒ ದ.ಕ. ಜಿಲ್ಲಾ ಕಾರ್ಯದರ್ಶಿ ಬಾಸಿತ್ ಉಪ್ಪಿನಂಗಡಿ ಮಾತನಾಡಿದರು.

ಎಂಡೋ ಪಾಲನಾ ಕೇಂದ್ರದ ಮ್ಯಾನೇಜರ್ ಗೋಪಾಲಕೃಷ್ಣ ಭಟ್, ಎಸ್‌ಐಒ ಪಾಣೆಮಂಗಳೂರು ಅಧ್ಯಕ್ಷ ತಮೀಝ್ ಅಲಿ, ಉಪ್ಪಿನಂಗಡಿ ಅಧ್ಯಕ್ಷ ಅಸ್ಲಂ ಪಂಜಲ, ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಮುಸ್ತಫಾ ಎಂ.ಎಚ್. ಉಪಸ್ಥಿತರಿದ್ದರು.

ಎಸ್‌ಐಒ ಜಿಲ್ಲಾ ಕಾರ್ಯದರ್ಶಿ ಇರ್ಷಾದ್ ವೇಣೂರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News