ಎಸ್‌ಐಒ ಉಳ್ಳಾಲ ಘಟಕದಿಂದ ಇಫ್ತಾರ್ ಸ್ನೇಹಕೂಟ

Update: 2017-06-19 13:17 GMT

ಮಂಗಳೂರು, ಜೂ.19: ಎಸ್‌ಐಒ ಉಳ್ಳಾಲ ಶಾಖಾ ವತಿಯಿಂದ ಕಲ್ಲಾಪಿನ ಯುನಿಟಿ ಹಾಲ್‌ನಲ್ಲಿ ‘ಹಲವು ಧರ್ಮಗಳು: ಒಂದು ಭಾರತ ವಾರ್ಷಿಕ ಸಹೋದರತಾ ಅಭಿಯಾನದ’ ಅಂಗವಾಗಿ ಇಫ್ತಾರ್ ಸ್ನೇಹ ಕೂಟ ನಡೆಯಿತು.

ಎಸ್‌ಐಒ ರಾಜ್ಯ ಕಾರ್ಯದರ್ಶಿ ದಾನಿಶ್ ಚೆಂಡಾಡಿ ಮಾತನಾಡಿ ದೇಶದ ಸ್ವಾತಂತ್ರ್ಯ ಹೋರಾಟವು ಸಫಲವಾಗಲು ಕಾರಣವಾಗಿದ್ದ ಧಾರ್ಮಿಕ ಸೌಹಾರ್ದವನ್ನು ಇಂದು ವ್ಯವಸ್ಥಿತವಾಗಿ ಹಾಳುಗೆಡವಲಾಗುತ್ತಿದೆ. ಈ ಬಗ್ಗೆ ಜನರು ಜಾಗೃತರಾಗಬೇಕಾದ ಅವಶ್ಯಕತೆ ಇದೆ ಎಂದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ರಮಝಾನ್ ಸಂದೇಶ ನೀಡಿದರು. ಸದ್ಬಾವನಾ ವೇದಿಕೆಯ ಉಪಾಧ್ಯಕ್ಷ ಜೋಸ್ಲಿನ್ ಡಿಸೋಜ ಮಾತನಾಡಿದರು.

ಈ ಸಂದರ್ಭ ಸೋಲಿಡಾರಿಟಿ ಯೂತ್ ಮೂಮೆಂಟ್‌ನ ಶರೀಫ್ ಉಳ್ಳಾಲ, ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಅಧ್ಯಕ್ಷ ಕರೀಂ ಉಳ್ಳಾಲ, ಎಸ್‌ಐಒ ಜಿಲ್ಲಾ ಕಾರ್ಯದರ್ಶಿ ನಿಝಾಮುದ್ದೀನ್ ಉಪಸ್ಥಿತರಿದ್ದರು.

ಎಸ್‌ಐಒ ಉಳ್ಳಾಲ ಶಾಖೆಯ ಅಧ್ಯಕ್ಷ ಮುಹಮ್ಮದ್ ಅಶೀರುದ್ದೀನ್ ಮಂಜನಾಡಿ ಸ್ವಾಗತಿಸಿದರು. ಸದೀದ್ ಕಿರಾಅತ್ ಪಠಿಸಿದರು. ಆಸಿಫ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News