×
Ad

ಇಸ್ಲಾಂ ಕುರಿತು ಅವಹೇಳನ: ಆರೋಪಿ ಬಂಧನ

Update: 2017-06-19 18:50 IST

ಹೊನ್ನಾವರ,ಜೂ19: ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮದ ಕುರಿತು ಅವಹೇಳನಕಾರಿಯಾದ ಮೆಸೇಜ್ ಹರಿಯಬಿಟ್ಟ ಆರೋಪಿ ಹೊನ್ನಾವರ ತಾಲೂಕಿನ ಹೊದ್ಕೆಶಿರೂರಿನ ಜಯವಂತ ನಾಯ್ಕನನ್ನು ಹೊನ್ನಾವರ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಸ್ಲಾಂ ಧರ್ಮೀಯರ ಪವಿತ್ರ ಸ್ಥಳವಾದ ಮಕ್ಕಾದ ಕಾಬಾ ಮಸೀದಿಯ ಬಗ್ಗೆ ವ್ಯಂಗ್ಯ ಚಿತ್ರವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹರಿಬಿಟ್ಟು ಮುಸ್ಲಿಂರ ಧಾರ್ಮಿಕ ಭಾವನಕ್ಕೆ ಧಕ್ಕೆ ಆಗಿದೆ.

ಆರೋಪಿಯನ್ನು ಬಂಧಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಚಂದಾವರದ ಜಮಾಅತುಲ್ ಮುಸ್ಲಿಮಿನ್ ಸಂಸ್ಥೆ ಮತ್ತು ಇಸ್ಲಾಂ ಸಮುದಾಯದ ಮುಖಂಡರು ಪೋಲಿಸ್ ಠಾಣೆಗೆ ಹಾಗೂ ತಹಸೀಲ್ದಾರಿಗೆ ದೂರು ಸಲ್ಲಿಸಿದ್ದರು.

ಪಿಎಸ್‌ಐ ಆನಂದಮೂರ್ತಿ ಈ ಪ್ರಕರಣದ ಆರೋಪಿ ಹೊದ್ಕೆಶಿರೂರಿನ ಜಯವಂತ ನಾಯ್ಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಜೂ.27 ರವರೆಗೆ ಆರೋಪಿಗೆ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News