‘ಏಜ್ -ಮಂಗಳೂರು’ನ ಅಧ್ಯಕ್ಷರಾಗಿ ಝಾಹಿದ್ ಹುಸೈನ್ ಬಾಜ್ಜಿ ಅವಿರೋಧವಾಗಿ ಆಯ್ಕೆ
Update: 2017-06-19 18:52 IST
ಮಂಗಳೂರು.ಜೂ,19:ನಗರದ ಹಿರಿಯ ನಾಗರಿಕರ ಸಂಘಟನೆ ‘ಏಜ್ -ಮಂಗಳೂರು’ನ ಅಧ್ಯಕ್ಷರಾಗಿ ಝಾಹಿದ್ ಹುಸೈನ್ ಬಾಜ್ಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಲಕ್ಷ್ಮೀ ರಾವ್ ಆರೂರ್,ಕಾರ್ಯದರ್ಶಿಯಾಗಿ ರೀಟಾ ರೋಡ್ರಿಗಸ್,ಜಂಟಿ ಕಾರ್ಯದರ್ಶಿಯಾಗಿ ಎಂ.ಎಸ್.ಕಾಮತ್,ಖಜಾಂಜಿಯಾಗಿ ಮಾರ್ಕ್ ಸಲ್ದಾನ ಹಾಗೂ ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ಅಶೋಕ್ ಕುಮಾರ್ ಕಾಸರಗೋಡ್,ಐರಿನ್ ಪಾಯಸ್,ಶಮೀನಾ ಕುನಿಲ್,ಲೂಸಿ ಕ್ಲೇರೆನ್ಸ್ ವಾಝ್ ,ಕೆ.ಎನ್.ಮಂಜುನಾಥ್ ಹಾಗೂ ಕುಸುಮಾ ಎನ್.ರಾವ್ ಅವಿರೊಧವಾಗಿ ಆಯ್ಕೆ ಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.