ಜೆಡಿಎಸ್‌ನಿಂದ ಇಫ್ತಾರ್ ಕೂಟ
Update: 2017-06-19 19:18 IST
ಕಾಪು, ಜೂ.19: ಉಡುಪಿ ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಇಫ್ತಾರ್ ಕೂಟವನ್ನು ರವಿವಾರ ಕಾಪುವಿನಲ್ಲಿ ಏರ್ಪಡಿಸಲಾಗಿತ್ತು.
ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ಕಾಪು ಮಾತನಾಡಿ, ದೇಶದಲ್ಲಿ ಅನಾದಿ ಕಾಲದಿಂದಲೂ ಸರ್ವಧರ್ಮಿಯರು ಸೌಹಾರ್ದಯುತ ಜೀವನ ನಡೆಸುತ್ತಾ ಬಂದಿದ್ದಾರೆ. ಪ್ರತಿಯೊಬ್ಬರು ಅವರವರ ಆಚಾರ ವಿಚಾರ ಗಳೊಂದಿಗೆ ಇತರ ಧರ್ಮಿಯರನ್ನು ಗೌರವಿಸಬೇಕು ಎಂದು ಹೇಳಿದರು. ಜಿಲ್ಲಾ ಕಾರ್ಯಧ್ಯಕ್ಷ ವಾಸುದೇವ ರಾವ್, ರಾಜ್ಯ ಯುವ ಜೆಡಿಎಸ್ ಉಪಾಧ್ಯಕ್ಷ ದಿಲೇಶ್ ಶೆಟ್ಟಿ, ಕಾಪು ಬ್ಲಾಕ್ ಅಧ್ಯಕ್ಷ ಸುಧಾಕರ ಶೆಟ್ಟಿ, ಕಾರ್ಯದರ್ಶಿ ಜಯರಾಮ ಆಚಾರ್ಯ, ಲತೀಫ್ ದಾವೂದ್ ಉಚ್ಚಿಲ, ರಝಾಕ್ ಕರೀಂ ಉಚ್ಚಿಲ, ರಫೀಕ್ ಉಚ್ಚಿಲ, ಶಾಲಿನಿ ಕೆಂಚನೂರು, ಮುಕ್ತಾರ್ ಕೊಟೇಶ್ವರ, ರೋಯಿತ್ ಕರಂಬಳ್ಳಿ ಉಪಸ್ಥಿತರಿದ್ದರು.