×
Ad

ಕನ್ನಡಿಗರು ದುಬೈ ವತಿಯಿಂದ ಇಫ್ತಾರ್ ಕೂಟ

Update: 2017-06-19 19:35 IST

ದುಬೈ,ಜೂ.19: ಯುಏಇ ಯಲ್ಲಿರುವ ಕನ್ನಡಿಗರಲ್ಲಿ ಸೌಹಾರ್ದತೆಯನ್ನು ಮತ್ತು ಕನ್ನಡ ಪ್ರೇಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಿಗರು ದುಬೈ ವತಿಯಿಂದ ಇದೆ ತಿಂಗಳ 22ನೇ ತಾರೀಖಿನಂದು ದೇರಾ ದುಬೈಯ ಪರ್ಲ್ ಕ್ರೀಕ್ ಹೋಟೆಲಿನ ಬಾಲ್ ರೂಮಿನಲ್ಲಿ ಇಫ್ತಾರ್ ಕೂಟವನ್ನು ಸಂಘಟಕರು ಆಯೋಜಿಸಿದ್ದಾರೆ.

ಕನ್ನಡಿಗರು ದುಬೈ ಸಂಘದ ಅಧ್ಯಕ್ಷರಾದ ಶ್ರೀ ವೀರೇಂದ್ರ ಬಾಬು ಅವರು ಮಾತಾಡಿ ಈ ಸಂಘಮದಲ್ಲಿ ಎಲ್ಲಾ ಧರ್ಮದ ಅನುಯಾಯಿಗಳು ಪಾಲ್ಗೊಳ್ಳಲಿದ್ದಾರೆ ಎಂದರು , ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆರ್  ಸಿ ಗ್ರೂಪ್ ಆಫ್ ಹೋಟೆಲ್ ಮಾಲೀಕರಾದ ಶ್ರೀ ರವೀಶ್ ಗೌಡ, ಎಂಸ್ಕ್ವೇರ್ ಮಾಲೀಕರಾದ ಶ್ರೀ ಮುಸ್ತಫಾ ದಂಪತಿಗಳು ಹಾಗೂ ಇನ್ನಿತರ ಸಾಮಾಜಿಕ ಧಾರ್ಮಿಕ ನೇತಾರರು ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು,

ಇಫ್ತಾರ್ ಕೂಟದ ಸಂಘಟಕರಾದ ಮಾಜಿ ಅಧ್ಯಕ್ಷ ಸದನ್ ದಾಸ್ , ಮಲ್ಲಿಕಾರ್ಜುನ ಗೌಡ ಅವರು ಪತ್ರಿಕಾ ಹೇಳಿಕೆಯನ್ನು ನೀಡುತ್ತಾ ಪ್ರಸಕ್ತ ಭಾರತದಲ್ಲಿ ನಡೆಯುವ ಕೋಮು ದಳ್ಳೂರಿಗೆ ಇಂತಹ ಸೌಹಾರ್ದ ಸ್ನೇಹ ಸಮ್ಮಿಲನ ಬಹಳ ಉಪಯೋಗಕಾರಿಯಾಗುತ್ತದೆ ಮತ್ತು ಕರ್ನಾಟಕ ಮತ್ತು ಕನ್ನಡ ಭಾಷೆ ಮೇಲಿನ ಅಭಿಮಾನವನ್ನು ಇನ್ನೆಷ್ಟು ಜನರ ಮನಸ್ಸಲ್ಲಿ ತುಂಬಲು ಸಹಾಯವಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೀಪಕ್ ಸೋಮಶೇಖರ್, ಬಾಲಕೃಷ್ಣ, ಅರುಣ್ ಮುಂತಾದ ಕನ್ನಡಿಗರು ದುಬೈ ತಂಡದ ಸದಸ್ಯರು ಸಹ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News