ಜೂ.21: ಅಳೇಕಲದಲ್ಲಿ ಪ್ರಾರ್ಥನಾ ಸಂಗಮ
Update: 2017-06-19 20:17 IST
ಮಂಗಳೂರು, ಜೂ.19: ಅಲ್ ಮಸ್ಜಿದುಲ್ ಜಾಮಿಅ: ಅಲ್ ಅಮೀನ್ ಅಳೇಕಲದಲ್ಲಿ ರಮಝಾನ್ 27ರ ರಾತ್ರಿ ಪ್ರಾರ್ಥನಾ ಸಮ್ಮೇಳನವು ಜೂ.21ರಂದು ನಡೆಯಲಿದೆ.
ತರಾವೀಹ್ ನಮಾಝ್‌ನ ಬಳಿಕ ನಡೆಯುವ ಸಂಗಮಕ್ಕೆ ಉಳ್ಳಾಲ ಖಾಝಿ ಅಸೈಯ್ಯದ್ ಫಝಲ್ ಹಾಮಿದ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ನೇತೃತ್ವ ನೀಡುವರು. ಪೊಸೋಟ್ ಮಳ್‌ಹರ್‌ನ ಪ್ರಾಂಶುಪಾಲ ಅನಸ್ ಸಿದ್ದೀಕ್ ಶಿರಿಯಾ ಮುಖ್ಯ ಭಾಷಣ ಮಾಡುವರು ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಯು.ಡಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.