ಕಾಸರಗೋಡು: ಮನೆಗೆ ನುಗ್ಗಿದ ಕಳ್ಳರು
Update: 2017-06-19 20:17 IST
ಕಾಸರಗೋಡು,ಜೂ.19: ಮನೆಗೆ ನುಗ್ಗಿದ ಕಳ್ಳರು 13 ಪವನ್ ಚಿನ್ನಾಭರಣ, 40 ಸಾವಿರ ರೂ. ನಗದು ಕಳವುಗೈದ ಘಟನೆ ಮಧೂರಿನಲ್ಲಿ ನಡೆದಿದೆ.
ಮಧೂರು ಕ್ಷೇತ್ರದ ನೌಕರ ಗಣೇಶ್ ಎಂಬವರ ಮನೆಯಲ್ಲಿ ಆದಿತ್ಯವಾರ ರಾತ್ರಿ ಕಳವು ನಡೆದಿದೆ. ಮನೆಯವರು ಮನೆಗೆ ಬೀಗ ಹಾಕಿ ಆದಿತ್ಯವಾರ ಸಂಜೆ ಕಾಸರಗೋಡು ಪೇಟೆಗೆ ತೆರಳಿದ್ದು, ರಾತ್ರಿ 9.30 ಕ್ಕೆ ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಅಡುಗೆ ಕೋಣೆಯ ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದು, ಎರಡು ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿದ್ದಾರೆ.
ವಿದ್ಯಾನಗರ ಠಾಣಾ ಪೊಲೀಸರು ಸ್ಥಳಕ್ಕಾಮಿಸಿ ತನಿಖೆ ನಡೆಸುತ್ತಿದ್ದಾರೆ.