ಬೈಕ್ ಪಲ್ಟಿ: ಸಹಸವಾರನಿಗೆ ಗಾಯ
Update: 2017-06-19 20:18 IST
ಮಂಗಳೂರು, ಜೂ.19: ಪಡುಪಣಂಬೂರು ಕಡೆಯಿಂದ ಕಾಟಿಪಳ್ಳ ರಸ್ತೆಗೆ ಚಲಿಸುತ್ತಿದ್ದ ಬೈಕ್ ಸುರತ್ಕಲ್ ಕಾನ ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ಪಲ್ಟಿ ಹೊಡೆದ ಘಟನೆ ಜೂ.17ರಂದು ರಾತ್ರಿ 11:30ಕ್ಕೆ ನಡೆದಿದೆ.
ಇದರಿಂದ ರೋಶನ್ ಎಂಬವರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗೇಶ್ ಎಂಬವರು ಬೈಕ್ ಸವಾರಿ ಮಾಡುತ್ತಿದ್ದು, ಗಾಯಗೊಂಡ ರೋಶನ್ ಸಹಸವಾರನಾಗಿದ್ದರು ಎಂದು ತಿಳಿದು ಬಂದಿದೆ.
ಮಂಗಳೂರು ಉತ್ತರ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.