ಸಾಂಕ್ರಾಮಿಕ ರೋಗ ಕೇಂದ್ರವಾಗಿ ಪರಿವರ್ತನೆಗೊಂಡಿದೆ ಈ ಮೀನು ಮಾರುಕಟ್ಟೆ
ಕಾಸರಗೋಡು,ಜೂ.19 : ಹೆಸರಿಗಷ್ಟೇ ಮಾದರಿ ಮೀನು ಮಾರುಕಟ್ಟೆ, ಆದರೆ ಮಾರುಕಟ್ಟೆ ಮಾತ್ರ ಸಾಂಕ್ರಾಮಿಕ ರೋಗ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಕಾಸರಗೋಡಿನ ಈ ಮೀನುಮಾರುಕಟ್ಟೆ ನಾಮ ಫಲಕಕ್ಕೆ ಮಾತ್ರ ಸೀಮಿತ ಗೊಂಡಿದೆ.ಮೀನು ಮಾರಾಟಗಾರರು, ಗ್ರಾಹಕರು ಈ ಮಾರುಕಟ್ಟೆಗೆ ಬರುವುದೇ ದೊಡ್ಡ ಸವಾಲಾಗಿದೆ. ಒಂದೆಡೆ ಮಾಲಿನ್ಯ ರಾಶಿ , ಮೇಲಿನ ನೀರು , ಸ್ವಚ್ಛತೆ ಇಲ್ಲದೆ ಇರುವುದು ದೊಡ್ಡ ಸಮಸ್ಯೆಯಾಗಿದೆ.
ನಗರಸಭೆ ಸಮಯಕ್ಕೆ ಶುಲ್ಕ ವಸೂಲು ಮಾಡುತ್ತಿದೆ. ಆದರೆ ಈ ಮಾರುಕಟ್ಟೆಯ ದುಸ್ಥಿತಿ ಬಗ್ಗೆ ತಲೆ ಕೆಡಿಸ್ಕೊಳ್ಳುತ್ತಿಲ್ಲ .ಎರಡೂ ವರೆ ವರ್ಷಗಳ ಹಿಂದೆ ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಮಾದರಿ ಮೀನು ಮಾರುಕಟ್ಟೆಯಾಗಿ ಕಾಸರಗೋಡು ಮೀನುಮಾರುಕಟ್ಟೆಯನ್ನು ಉದ್ಘಾಟಿಸಲಾಗಿತ್ತು.ಆದರೆ ಮೀನು ಮಾರುಕಟ್ಟೆ ಮಾರಾಟಗಾರರಿಗೆ ಉಪಕಾರವಾಗಿಲ್ಲ . ಮೀನು ಮಾರಾಟ ವಾಗುತ್ತಿರುವುದು ರಸ್ತೆಯಲ್ಲೇ.
ದೀರ್ಘಕಾಲದ ನಂತರ ಕಾಸರಗೋಡಿಗೆ ಸುಸಜ್ಜಿತ ಹಾಗೂ ಅತ್ಯಾಧುನಿಕ ಎನ್ನಲಾದ ಮೀನು ಮರುಕಟ್ಟೆಯನ್ನು ಮಂಜೂರು ಮಾಡಲಾಗಿದ್ದರೂ, ಇದೀಗ ಮೀನುಮಾರಾಟಗಾರರಿಗೆ ಪ್ರಯೋಜನಕ್ಕಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮಲಿನ ನೀರು ಹರಿದು ಚರಂಡಿ ಸೇರುವ ರೀತಿಯಲ್ಲಿ ತಳಭಾಗದಲ್ಲಿ ಇಳಿಜಾರು ವ್ಯವಸ್ಥೆಯನ್ನೂ ನಿರ್ಮಿಸಲಾಗಿಲ್ಲ. ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಲಿನ ನೀರು ದಾಸ್ತಾನುಗೊಳ್ಳುತ್ತಿದ್ದು, ಸೊಳ್ಳೆಗಳು ಹುಟ್ಟಿಕೊಳ್ಳಲೂ ಕಾರಣವಾಗುತ್ತಿದೆ.
ಸುಮಾರು ಎರಡುವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮೀನುಮಾರುಕಟ್ಟೆ ಕಟ್ಟಡ ಮೀನು ಮಾರಾಟಗಾರರ ಪಾಲಿಗೆ ನಿರುಪಯುಕ್ತವಾಗುತ್ತಿದೆ. ಮೀನುಮಾರಾಟಗಾರರು ಕಟ್ಟಡದೊಳಗೆ ಉಸಿರುಗಟ್ಟಿಸುವ ವಾತಾವರಣದಲ್ಲಿ ವ್ಯಾಪಾರ ನಡೆಸಬೇಕಾಗಿದೆ. ಇದರಿಂದ ವ್ಯಾಪಾರಿಗಳು ಮತ್ತೆ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲ ಆರಂಭವಾದೊಡನೆ ಸಮಸ್ಯೆ ದುಪ್ಪಟ್ಟಾಗಿದೆ. ಸಾಂಕ್ರಾಮಿಕ ರೋಗಗಳ ಕೇಂದ್ರವಾಗಿ ಈ ಮಾರುಕಟ್ಟೆ ಪರಿವರ್ತನೆ ಗೊಂಡಿದೆ. ಮಾರು ಕಟ್ಟೆ ನಿರ್ಮಿಸಿದರೂ ಹೊರಗಡೆ ರಸ್ತೆಯಲ್ಲೇ ಮೀನು ಮಾರಾಟ ಮಾಡಲಾಗುತ್ತಿದೆ.ಒಳಗಡೆ ಕೆಲವೇ ಕೆಲ ಮಂ ದಿ ಮಂದಿ ಮೀನು ಮಾರಾಟ ಮಾಡುತ್ತಿದ್ದು , ಮೀನು ಮಾರುಕಟ್ಟೆಗೆ ಕಾಲಿಡದ ಸ್ಥಿತಿ ಉಂಟಾಗಿದೆ .ಅನಿವಾರ್ಯವಿಲ್ಲದೆ ಮೀನು ಮಾರಾಟಗಾರರು ಇಲ್ಲಿ ಮಾರಾಟ ಮಾಡುತ್ತಿದ್ದು,ಕಟ್ಟಡ, ವ್ಯವಸ್ಥೆ ಕಾಣುತ್ತಿದ್ದರೂ ಅದು ಮೀನುಗಾರರಿಗೆ ಪ್ರಯೋಜನ ವಾಗಿಲ್ಲ .ನೀರು, ಬೆಳಕಿನ ವ್ಯವಸ್ಥೆ ಇಲ್ಲಿಲ್ಲ. ಇದು ದೊಡ್ಡ ಸಮಸ್ಯೆ. ಮದ್ಯ ಬಾಟಲಿ ಮೀನಿನ ಅವಶೇಷಗಳು ಶೌಚಾಲಯ, ಕೇಂದ್ರದ ಬದಿಯಲ್ಲಿ ಕಂಡು ಬರುತ್ತಿದೆ .