5 ವರ್ಷದ ವಧು-6 ವರ್ಷದ ವರ: ಇದು ಎಲ್ಲರೂ ಮೆಚ್ಚುವ ಬಾಲ್ಯವಿವಾಹ!

Update: 2017-06-19 15:29 GMT

ಸ್ಕಾಟ್ ಲ್ಯಾಂಡ್, ಜೂ.19: ಬಾಲ್ಯವಿವಾಹವನ್ನು ಯಾರೂ ಪ್ರೋತ್ಸಾಹಿಸುವುದಿಲ್ಲ. ಸಾಮಾಜಿಕ ಅನಿಷ್ಠ ಪದ್ಧತಿಯಾಗಿರುವ ಬಾಲ್ಯ ವಿವಾಹಕ್ಕೆ ಕಾನೂನಿನಲ್ಲೂ ಅವಕಾಶವಿಲ್ಲ. ಆದರೆ ಸ್ಕಾಟ್ ಲ್ಯಾಂಡ್ ನಲ್ಲಿ ನಡೆದ ಬಾಲ್ಯವಿವಾಹವೊಂದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಎಲ್ಲರೂ ಮುಕ್ತ ಮನಸ್ಸಿನಿಂದ ಪುಟ್ಟ ದಂಪತಿಯನ್ನು ಹರಸಿದ್ದಾರೆ. ಇಷ್ಟಕ್ಕೂ ಸ್ಕಾಟ್ ಲ್ಯಾಂಡಿನ ಫೋರೆಸ್ ಎಂಬಲ್ಲಿ ನಡೆದ ಈ ವಿವಾಹ ಬಲವಂತದಿಂದಲೋ ಅಥವಾ ಅಜ್ಞಾನದಿಂದಲ್ಲ. ಬದಲಾಗಿ, ಕ್ಯಾನ್ಸರ್ ಪೀಡಿತ ಬಾಲಕಿಯ ಕೊನೆಯ ಆಸೆಗಾಗಿ.

ಈಲೆದ್ ಪೇಟರ್ ಸನ್ ಎಂಬ ಬಾಲಕಿ ಸಣ್ಣ ವಯಸ್ಸಿನಲ್ಲೇ ನ್ಯೂರೋಬ್ಲಾಸ್ಟೋಮಾ ಎಂಬ ಕಾಯಿಲೆಗೆ ತುತ್ತಾದ ನಂತರ ತನ್ನ ಕೊನೆಯ ಬಯಕೆಗಳ ಪಟ್ಟಿಗಳನ್ನು ರಚಿಸಿದ್ದಳು. ಈ ಪಟ್ಟಿಯಲ್ಲಿ ಆಕೆಯ ಮಹತ್ವದ ಕೊನೆಯ ಆಸೆ ತನ್ನ ಆತ್ಮೀಯ ಗೆಳೆಉ 6 ವರ್ಷದ ಹ್ಯಾರಿಸನ್ ಗ್ರೀರ್ ನನ್ನು ಮದುವೆಯಾಗುವುದು.

ಅದರಂತೆ ಈಲೆದ್ ಳ ಕನಸು ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹ್ಯಾರಿಸನ್ ಹಾಗೂ ಈಲೆದ್ ಪರಸ್ಪರ ನೆಕ್ಲೇಸ್ ಬದಲಾಯಿಸಿಕೊಂಡರು. ಇದೇ ಸಂದರ್ಭ ಇವರನ್ನು “ಎಂದೆಂದಿಗೂ ಆತ್ಮೀಯ ಸ್ನೇಹಿತರು” ಎಂದು ಘೋಷಿಸಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹ್ಯಾರಿಸನ್ ರ ತಂದೆ ಬಿಲ್ಲಿ, ಹ್ಯಾರಿಸನ್ ಈ ಮೊದಲು ಒಂದು ಮದುವೆ ಕಾರ್ಯಕ್ರಮದಲ್ಲೂ ಭಾಗವಹಿಸದವನಲ್ಲ. ಇಂದಿನ ಕಾರ್ಯಕ್ರಮದ ಪ್ರತಿ ಕ್ಷಣವನ್ನೂ ಆತ ಆನಂದಿಸಿದ” ಎಂದಿದ್ದಾರೆ.

“ಅಲ್ಲಿ ಏನು ನಡೆಯುತ್ತಿತ್ತು ಎನ್ನುವುದು ಆತನಿಗೆ ತಿಳಿದಿತ್ತು. ಆಕೆಗೆ ಈ ಕಾರ್ಯಕ್ರಮ ಎಷ್ಟು ಮುಖ್ಯ ಎನ್ನುವುದರ ಅರಿವು ಹ್ಯಾರಿಸನ್ ಗಿತ್ತು. ಆಕೆಗಾಗಿ ಏನನ್ನೂ ಮಾಡಲು ಸಿದ್ಧವಿದ್ದ” ಎಂದವರು ಹೇಳಿದರು.

ಸೂಪರ್ ಹೀರೊಗಳ ಧಿರಿಸಿನಲ್ಲಿದ್ದ ಅತಿಥಿಗಳು ಇಬ್ಬರು ಮಕ್ಕಳನ್ನೂ ರಂಜಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳನ್ನು ಮನರಂಜಿಸುವ ಸಲುವಾಗಿ ನೃತ್ಯ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News