×
Ad

ಕಟ್ಟಡದ ಕೊಠಡಿಯಲ್ಲಿ ಬೆಂಕಿ

Update: 2017-06-19 21:07 IST

ಉಡುಪಿ, ಜೂ.19: ಉಡುಪಿ ಬನ್ನಂಜೆಯ ಮಂಜುನಾಥ ಕಣ್ಣಿನ ಆಸ್ಪತ್ರೆ ಕಟ್ಟಡದ ಮೇಲೆ ಇರುವ ಕೊಠಡಿಯೊಂದರಲ್ಲಿ ಇಂದು ಸಂಜೆ ವೇಳೆ ಬೆಂಕಿ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿದೆ.

ಆಸ್ಪತ್ರೆಯಲ್ಲಿ ಕೆಲಸ ಮಾಡುವ ಉತ್ತರ ಕರ್ನಾಟಕದ ಅನ್ನಪೂರ್ಣ ಎಂಬವರ ಕೊಠಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದರಿಂದ ಮನೆಯೊಳಗೆ ಇದ್ದ ಬಟ್ಟೆಗಳು, ಬ್ಯಾಂಕ್ ಪಾಸ್‌ಬುಕ್, ನಗದು ಬೆಂಕಿಗೆ ಆಹುತಿ ಯಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕೆಲಸ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News