ಹೇರ್ ಮೆನ್ಸ್ ಸೆಲೂನ್ ಉದ್ಘಾಟನೆ
Update: 2017-06-19 21:11 IST
ಮಂಗಳೂರು,ಜೂ.19:ನಗರದ ಕದ್ರಿಯ ಒರೇನಿಯಾ ಅಪಾರ್ಟ್‌ಮೆಂಟ್ ಬಳಿ ಸುಸಜ್ಜಿತ ಹವಾನಿಯಂತ್ರಿತ ‘ಹೇರ್ ಮೆನ್ಸ್ ಸೆಲೂನ್’ನ್ನು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್‌ನ ಜನರಲ್ ಸೆಕ್ರೇಟರಿ ಸುಹೈಲ್ ಕಂದಕ್ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ನ ಜನರಲ್ ಸೆಕ್ರೇಟರಿ ಮುಹಮ್ಮದ್ ಶುಯೇಬ್ ,ಉದ್ಯಮಿ ರಯೀಝ್ ಪಿ.ಸಿ ಮೊದಲಾದವರು ಉಪಸ್ಥಿತರಿದ್ದರು.‘ಹೇರ್ ಮೆನ್ಸ್ ಸೆಲೂನ್’ಸಂಸ್ಥೆಯ ಮಾಲಕ ನೌಶೀನ್ ಅಬ್ದುಲ್ಲಾ ಅತಿಥಿಗಳನ್ನು ಸ್ವಾಗತಿಸಿದರು.
ನಗರದಲ್ಲಿ ಅತ್ಯಂತ ಸುಸಜ್ಜಿತವಾದ ರೀತಿಯಲ್ಲಿ ,ಆಧುನಿಕ ಸಲಕರಣೆ,ಸೌಂದರ್ಯ ವರ್ಧಕಗಳೊಂದಿಗೆ ಮತ್ತು ತಂತ್ರಜ್ಞಾನದೊಂದಿಗೆ ಕೇಶ ವಿನ್ಯಾಸಗೊಳಿಸುವುದರೊಂದಿಗೆ ,ನುರಿತ ಕೇಶ ವಿನ್ಯಾಸಗಾರರನ್ನು ಹೊಂದಿರುವ,ಪುರುಷರ ಸೌಂದರ್ಯ ವರ್ಧಿಸುವ ಹೇರ್ ಮೆನ್ಸ್ ಸೆಲೂನ್ ಹವಾನಿಯಂತ್ರಿತ ಪ್ರತ್ಯೇಕ ಕೊಠಡಿಗಳನ್ನು ಹೊಂದಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.