×
Ad

ಸಮಸ್ತ ಮದ್ರಸ ಪಬ್ಲಿಕ್ ಪರೀಕ್ಷೆ : ಸಾಧಕ ವಿದ್ಯಾರ್ಥಿಗಳು

Update: 2017-06-20 18:24 IST
ಮರಿಯಮ್ಮ ಅಂಶಬಾ

ಮಂಗಳೂರು,ಜೂ.20: ಸುನ್ನಿ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಪಜೀರ್ ನಡುಹಿತ್ಲುಬಿನ ತಝ್‌ಕಿಯತುಲ್ ವಿಲ್‌ದಾನ್ ಮದ್ರಸದ 5ನೆ ತರಗತಿ ವಿದ್ಯಾರ್ಥಿನಿ ಹಾಗು ಮುಹಮ್ಮದ್ ಅಶ್ರಫ್-ಯಾಸ್ಮೀನ್ ದಂಪತಿಯ ಪುತ್ರಿ ಮರಿಯಮ್ಮ ಅಂಶಬಾ 511 ಅಂಕ ಪಡೆದು ಕೊಣಾಜೆ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

...

ಸಹಲಾ ಫಾತಿಮಾ

ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಕಲಾಯಿಯ ಹಿದಾಯತುಲ್ ಇಸ್ಲಾಂ ಮದ್ರಸವು 7 ಮತ್ತು 5ನೆ ತರಗತಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. 7ನೆ ತರಗತಿಯ ವಿದ್ಯಾರ್ಥಿನಿ ಹಾಗು ಇಮ್ತಿಯಾಝ್-ಅಲೀಮಾ ಸಬನಾ ದಂಪತಿಯ ಪುತ್ರಿ ಸಹಲಾ ಫಾತಿಮಾ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಬಾಸಿತ್

ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ 7, 10, ಪ್ಲಸ್ 2 ವಿದ್ಯಾರ್ಥಿಗಳಿಗೆ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಸುರತ್ಕಲ್ ಮದ್ರಸವು ಶೇ.100 ಫಲಿತಾಂಶ ದಾಖಲಿಸಿದೆ. ಪ್ಲಸ್ 2 ವಿದ್ಯಾರ್ಥಿ ಮುಹಮ್ಮದ್ ಅಬ್ದುಲ್ ಬಾಸಿತ್ ಸುರತ್ಕಲ್ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News