ವಾಹನಗಳಿಗೆ ಢಿಕ್ಕಿ ಹೊಡೆದ ನಿಯಂತ್ರಣ ತಪ್ಪಿದ ಕಾರು
Update: 2017-06-20 18:34 IST
ಭಟ್ಕಳ,ಜೂ.20: ನವಾಯತ್ ಕಾಲೋನಿಯ ರಾ.ಹೆ. 66ರಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಬೈಕ್, ಆಟೋರಿಕ್ಷಾ ನಂತರ ಲೂನಾ ಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಜರಗಿದೆ. ಘಟನೆಯಲ್ಲಿ ಐದು ಮಂದಿಗೆ ಗಾಯಗಳಾಗಿವೆ.
ಮಂಗಳೂರಿನಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಕಾರೊಂದು ನಗರದ ನವಯಾತ್ ಕಾಲೋನಿಯ ರಾ.ಹೆ.66ರಲ್ಲಿನ ಹೊಟೇಲ್ ಯಮ್ಮೀಸ್ ಬಳಿ ನಿಯಂತ್ರಣ ಕಳೆದುಕೊಂಡಿದ್ದು ಮೊದಲು ಬೈಕ್, ಆಟೋ ರಿಕ್ಷಾ ಹಾಗೂ ಲೂನಾ ಬೈಕಿಗೆ ಢಿಕ್ಕಿ ಹೊಡೆಯಿತು ಎಂದು ಪ್ರತ್ಯೆಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.