ಚೊಕ್ಕಬೆಟ್ಟು: ಮಳೆಗಾಲದಲ್ಲೂ ನೀರಿಗಾಗಿ ಪರದಾಟ

Update: 2017-06-20 13:18 GMT

ಮಂಗಳೂರು, ಜೂ.20: ಮನಪಾ ವ್ಯಾಪ್ತಿಯ ಚೊಕ್ಕಬೆಟ್ಟು 5ನೆ ವಾರ್ಡ್‌ನಲ್ಲಿ ಮಳೆಗಾಲದಲ್ಲೂ ನೀರಿಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಸ್ಥಳೀಯ ಕಾರ್ಪೋಟರ್ ಅಯಾಝ್ ಕೃಷ್ಣಾಪುರ ಆರೋಪಿಸಿದ್ದಾರೆ.

ಚೊಕ್ಕಬೆಟ್ಟು, ಕೃಷ್ಣಾಪುರ ಪರಿಸರದಲ್ಲಿ ಕಳೆದ ಒಂದು ತಿಂಗಳಿನಿಂದ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಮನಪಾ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಆಗಾಗ ವಿದ್ಯುತ್ ಕೈ ಕೊಡುವುದರಿಂದ ನೀರು ಪೂರೈಕೆ ಅವ್ಯವಸ್ಥೆಯಿಂದ ಕೂಡಿದೆ ಎಂದು ಅಯಾಝ್ ತಿಳಿಸಿದ್ದಾರೆ.

 ವಿದ್ಯುತ್ ಸಮಸ್ಯೆಯ ಬಗ್ಗೆ ಮೆಸ್ಕಾಂ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ ಅಸಮರ್ಪಕ ಉತ್ತರ ನೀಡುತ್ತಿದ್ದಾರೆ. ಮಳೆಗಾಲ ಆರಂಭವಾಗಿ ಮೂರು ವಾರವಾಗುತ್ತಿದೆ. ಕಳೆದ ಮೂರು ದಿನದಿಂದ ನಿರಂತರವಾಗಿ ನೀರು ಪೂರೈಕೆಯಾಗಿಲ್ಲ. ಸುರತ್ಕಲ್ ಸಮೀಪದ ಕಾನ ಎಂಬಲ್ಲಿ ಹಳೆಯ ಸಿಮೆಂಟ್ ಪೈಪ್ ಒಡೆದು ನೀರು ಸೋರಿಕೆಯಾಗುತ್ತಿದೆ. ಅದನ್ನು ದುರಸ್ತಿ ಮಾಡಲೂ ಕೂಡ ಮನಪಾ ಆಡಳಿತ ವಿಫಲವಾಗಿದೆ. ರಮಝಾನ್ ಹಿನ್ನಲೆಯಲ್ಲಿ ಈ ಸಮಸ್ಯೆ ಉಲ್ಬಣಿಸಿದ್ದರಿಂದ ತಕ್ಷಣ ಮನಪಾ ಸ್ಪಂದಿಸಿ ಜನರ ಪರದಾಟ ತಪ್ಪಿಸುವಂತೆ ಅಯಾಝ್ ಕೃಷ್ಣಾಪುರ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News