ಮರಕ್ಕೆ ಕಾರು ಢಿಕ್ಕಿ:ಚಾಲಕ ಸಾವು
Update: 2017-06-20 20:44 IST
ನಾಗಮಂಗಲ, ಜೂ.20: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಬದಿಯ ಮರಕ್ಕೆ ಢಿಕ್ಕಿಯೊಡೆದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೆಲ್ಲಿಗೆರೆ ಕ್ರಾಸ್‌ನಿಂದ ಚುಂಚನಗಿರಿಗೆ ತೆರಳುವ ಬೀದರ್ ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಂದ್ರಪ್ಪ ಅವರು ಪುತ್ರ ವಿನಯ್‌ಕುಮಾರ್ (27) ಸಾವನ್ನಪ್ಪಿದವ. ಈತ ಕಾರಿನಲ್ಲಿ ಬೆಳ್ಳೂರಿನ ನೆಲ್ಲಿಗೆರೆ ಕ್ರಾಸ್ ಕಡೆಯಿಂದ ತುಮಕೂರು ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಬೆಳ್ಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನಕ್ರಮ ವಹಿಸಿದ್ದಾರೆ.