×
Ad

ಬೆಳ್ತಂಗಡಿ :ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಯ ಬಂಧನ

Update: 2017-06-20 21:01 IST

ಬೆಳ್ತಂಗಡಿ,ಜೂ.20:ಮನೆಗೆ ಹೋಗುತ್ತಿದ್ದ ಬಾಲಕಿಯ ಮೇಲೆ ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ ಸಿಕ್ಕಿ ಬಿದ್ದು ಪೋಲೀಸರ ಅತಿಥಿಯಾದ ಘಟನೆ ಬೆಳ್ತಂಗಡಿ ಪೇಟೆಯ ಮುಗುಳಿ ರಸ್ತೆಯಲ್ಲಿ ಸಂಭವಿಸಿದೆ. ಬಾಲಕಿಗೆ ಕಿರುಕುಳ ನೀಡಿದ ವ್ಯಕ್ತಿ ಬಂಟ್ವಾಳ ತಾಲೂಕಿನ ಕಾವಲೆ ಕಟ್ಟೆ ಗ್ರಾಮದ ನಿವಾಸಿ ಗೊಬ್ಬರ ವ್ಯಾಪಾರ ಮಾಡುವ ಇಬ್ರಾಹಿಂ(34) ಎಂಬಾತನಾಗಿದ್ದಾನೆ ಸಂಜೆಯ ವೆಳೆ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬೈಕಿನಲ್ಲಿ ಬಂದ ಆತ ಆಕೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದಾಗ ಬಾಲಕಿ ಹೆದರಿ ಬೊಬ್ಬೆ ಹೊಡೆದಿದ್ದಾಳೆ.

ಬೊಬ್ಬೆ ಕೇಳಿ ಅಲ್ಲಿ ಸಮೀಪದಲ್ಲಿದ್ದವರು ಓಡಿ ಬಂದಿದ್ದಾರೆ. ಇದರಿಂದ ಭಯಗೊಂಡ ಯುವಕ ವೇಗವಾಗಿ ಬೈಕ್ ಅನ್ನು ಚಲಾಯಿಸಿದಾನೆ ಸ್ವಲ್ಪ ಮುಂದೆ ಎದುರಿನಿಂದ ಬರುತ್ತಿದ್ದ ರಿಕ್ಷಾವೊಂದಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಬಾಲಕಿಯ ಕಿರುಚಾಟ ಕೇಳಿ ಓಡಿ ಬಂದವರು ಕೂಡಲೇ ಅಲ್ಲಿಗೆ ಹೋಗಿದ್ದು ಇಬ್ರಾಹಿಂ ಅನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.

ಬೆಳ್ತಂಗಡಿ ಪೋಲೀಸರು ಬಾಲಕಿ ನೀಡಿರುವ ದೂರಿನಂತೆ ಇಬ್ರಾಹಿಂ ವಿರುದ್ದ ಫೋಸ್ಕೋ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದರು ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲೀಸದರು ಜನರನ್ನು ಚದುರಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು. ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಎಸ್‌ಐ ರವಿ ಸ್ಥಳದಲ್ಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News