×
Ad

ಹಾವು ಕಡಿತ: ಮಹಿಳೆ ಮೃತ್ಯು

Update: 2017-06-20 21:35 IST

ಕುಂದಾಪುರ, ಜೂ.20: ವಿಷದ ಹಾವಿನ ಕಡಿತಕ್ಕೆ ಒಳಗಾದ ಬೈಂದೂರು ಯೋಜನ ನಗರದ ವಿಶಾಲಾಕ್ಷಿ(37) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಜೂ.19ರಂದು ಅಪರಾಹ್ನದ ವೇಳೆ ಮೃತ ಪಟ್ಟಿದ್ದು, ತನ್ನ ಪತ್ನಿಯ ಸಾವಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ನಿರ್ಲಕ್ಷವೇ ಕಾರಣ ಎಂಬುದಾಗಿ ಪತಿ ಗಜಾನನ ಪೂಜಾರಿ ನೀಡಿದ ದೂರಿ ನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶಾಲಾಕ್ಷಿ ಮಧ್ಯಾಹ್ನ 12:30ರ ಸುಮಾರಿಗೆ ಮನೆಯ ಅಡುಗೆ ಕೋಣೆ ಯಲ್ಲಿ ಪಾತ್ರೆ ತೆಗೆಯುವಾಗ ವಿಷಪೂರಿತ ಹಾವೊಂದು ಅವರ ಕೈಗೆ ಕಚ್ಚಿತು. ಇದರಿಂದ ಅಸ್ವಸ್ಥಗೊಂಡ ಅವರನ್ನು ಚಿಕಿತ್ಸೆಯ ಬಗ್ಗೆ ಬೈಂದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಚಿಕಿತ್ಸೆಗೆ ಸರಿಯಾದ ವ್ಯವಸ್ಥೆ ಸಿಗದ ಕಾರಣ ಮಧ್ಯಾಹ್ನ 1:30ಕ್ಕೆ ಕೂಡಲಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಯಿತು.

ಅಸ್ವಸ್ಥರಾಗಿದ್ದ ವಿಶಾಲಾಕ್ಷಿಯವರಿಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಯಾವುದೇ ಚಿಕಿತ್ಸೆಯನ್ನು ನೀಡಲಿಲ್ಲ. ನಿರ್ಲಕ್ಷ್ಯತನದಿಂದ ಯಾವುದೇ ಔಷಧೋಪಚಾರ ಮಾಡಲಿಲ್ಲ. ಸ್ವಲ್ಪಸಮಯದ ನಂತರ ವೈದ್ಯರು ಚಿಕಿತ್ಸೆ ನೀಡಲು ಮುಂದಾದಾಗ ವಿಶಾಲಾಕ್ಷಿಯವರು ಮೃತಪಟ್ಟಿರುವುದಾಗಿ ಗಜಾನನ ಪೂಜಾರಿ ದೂರಿದ್ದಾರೆ.
 

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News