ಸುಳ್ಳು ಹೇಳಿ ಮದುವೆ: ದೂರು

Update: 2017-06-20 16:15 GMT

ಕಾಪು, ಜೂ.8: ರೋಯಲ್ ಕೆರೇಬಿನ್ ಕ್ರೂಜ್ ಲಿಮಿಟೆಡ್ ಅಮೆರಿಕ ಶಿಫ್‌ನಲ್ಲಿ ಉದ್ಯೋಗ ಮಾಡುತ್ತಿರುವುದಾಗಿ ಸುಳ್ಳು ಹೇಳಿ ಮದುವೆಯಾಗಿ ಮೋಸ ಮಾಡಿರುವ ನಿತೇಶ್ ಶೆಟ್ಟಿ ಎಂಬವರ ವಿರುದ್ಧ ಕಾಪು ಕೊಪ್ಪಲ್‌ತೋಟದ ಕವಿತಾ ಕೆ. ಶೆಟ್ಟಿ(26) ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಿಂಗಳಿಗೆ 70,000ರೂ. ಸಂಬಳವಿರುವುದಾಗಿ ಹೇಳಿ ನಿತೇಶ್ 2017ರ ಮೇ 12ರಂದು ಕವಿತಾ ಅವರನ್ನು ಮದುವೆಯಾಗಿದ್ದು, ಬಳಿಕ ನಿತೇಶ್ ವಿವಾಹ ಕ್ಕಿಂತ ಮೊದಲು ತಿಳಿಸಿದ ಉದ್ಯೋಗದಲ್ಲಿ ಇಲ್ಲದೆ ಇರುವ ಮತ್ತು ಇತರೆ ಅವ್ಯವಹಾರಗಳಿರುವ ವಿಚಾರ ತಿಳಿದು ಬಂತೆಂದು ದೂರಿನಲ್ಲಿ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News