×
Ad

ಅಫ್ಘಾನ್: ಅಮೆರಿಕನ್ ನೆಲೆಯ 8 ಕಾವಲುಗಾರರ ಹತ್ಯೆ

Update: 2017-06-20 21:47 IST

ಕಾಬೂಲ್, ಜೂ. 20: ಅಫ್ಘಾನಿಸ್ತಾನದ ಅತಿ ದೊಡ್ಡ ಅಮೆರಿಕನ್ ನೆಲೆಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಅಫ್ಘಾನ್ ಕಾವಲುಗಾರರನ್ನು ಬಂದೂಕುಧಾರಿಗಳು ಕೊಂದಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.

 ಉತ್ತರ ಕಾಬೂಲ್‌ನ ಬಗ್ರಾಮ್ ನೆಲೆಯ ಸಮೀಪ ಈ ಕಾವಲುಗಾರರು ಸೋಮವಾರ ರಾತ್ರಿ ವಾಹನಗಳ ಸಾಲಿನಲ್ಲಿ ಮನೆಗೆ ತೆರಳುತ್ತಿದ್ದಾಗ ಅವರ ಮೇಲೆ ಭಯೋತ್ಪಾದಕರು ಹೊಂಚು ದಾಳಿ ನಡೆಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅವರೆಲ್ಲರೂ ಸ್ಥಳೀಯ ನಿವಾಸಿಗಳು ಎಂದು ಜಿಲ್ಲಾ ಗವರ್ನರ್ ಅಬ್ದುಲ್ ಶಕೂರ್ ಖುದ್ದೂಸಿ ತಿಳಿಸಿದರು.

ಇಬ್ಬರು ಕಾವಲುಗಾರರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News