ಫ್ರಾನ್ಸ್ ಪ್ರಧಾನಿಯಾಗಿ ಎಡ್ವರ್ಡ್ ಫಿಲಿಪ್ ಮರುನೇಮಕ

Update: 2017-06-20 16:21 GMT

 ಪ್ಯಾರಿಸ್, ಜೂ. 20: ಕಳೆದ ವಾರಾಂತ್ಯದಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ತನ್ನ ಪಕ್ಷ ಅಮೋಘ ವಿಜಯ ಗಳಿಸಿದ ಬಳಿಕ, ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್, ಎಡ್ವರ್ಡ್ ಫಿಲಿಪ್‌ರನ್ನು ಪ್ರಧಾನಿಯಾಗಿ ಮರುನೇಮಿಸಿದ್ದಾರೆ.

ರವಿವಾರ ನಡೆದ ಚುನಾವಣೆಯಲ್ಲಿ ಮ್ಯಾಕ್ರೋನ್‌ರ ‘ರಿಪಬ್ಲಿಕ್ ಆನ್ ಮೂವ್’ ಪಕ್ಷವು ನ್ಯಾಶನಲ್ ಅಸೆಂಬ್ಲಿಯಲ್ಲಿ ಭಾರೀ ಬಹುಮತವನ್ನು ಪಡೆದಿದೆ.

ಬುಧವಾರದ ವೇಳೆಗೆ ನೂತನ ಸರಕಾರವನ್ನು ರಚಿಸುವಂತೆ ಫಿಲಿಪ್‌ರಿಗೆ ಅಧ್ಯಕ್ಷರು ಸೂಚನೆ ನೀಡಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News