×
Ad

ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಲಕ್ನೋದಲ್ಲಿ ಮೋದಿ, ಯೋಗಿಯಿಂದ ಯೋಗ

Update: 2017-06-20 22:59 IST

ಹೊಸದಿಲ್ಲಿ, ಜೂ. 20: ಲಕ್ನೋದಲ್ಲಿ ಜೂ. 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮೂರನೇ ಆವೃತ್ತಿಯಲ್ಲಿ 51 ಸಾವಿರ ಯೋಗ ಆಸಕ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯೋಗ ಮಾಡಲಿದ್ದಾರೆ. ಲಕ್ನೋದ ರಮಾಭಾ ಅಂಬೇಡ್ಕರ್ ಸಭಾ ಸ್ಥಳದಲ್ಲಿ ನಡೆಯುವ ಯೋಗದಲ್ಲಿ ಯೋಗ ಆಶಕ್ತರ ಜೊತೆಗೆ ಹಲವು ಗಣ್ಯರು, ರಾಜಕಾರಣಿ, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. 

ಅಂತಾರಾಷ್ಟ್ರೀಯ ಯೋಗ ದಿನಾಚರಣೆದ ಕಾರ್ಯಕ್ರಮವನನ್ನು ಯಶಸ್ವಿಗೊಳಿಸುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆ, ಸರಕಾರೇತರ ಸಂಸ್ಥೆ, ಯೋಗ ಗುರುಗಳು ಲಕ್ನೋದಲ್ಲಿ ಶಿಬಿರ ಹಾಗೂ ಅಭ್ಯಾಸ ನಡೆಸುತ್ತಿದ್ದಾರೆ. ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ರಾಜಧಾನಿಯಾದ ಲಕ್ನೋದಲ್ಲಿ ಭರದಿಂದ ಸಿದ್ಧತೆ ನಡೆಯತ್ತಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಪ್ರದೇಶದ ರಾಜ್ಯಪಾಲ ರಾಮ್ ನಾಕ್ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕಾರ್ಯಕ್ರಮ ಜೂ. 21ರಂದು ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದೆ ಎಂದು ಆಯುಷ್ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News