ವೆಸ್ಟ್ ಲೈನ್ ಮತ್ತು ಎಂ ಫಾರ್ ಸಂಸ್ಥೆಯಿಂದ ದಾಖಲೆ ಅವಧಿಯಲ್ಲಿ ‘ರಾಫ್ಟ್ ಫೌಂಡೇಶನ್’ ನಿರ್ಮಾಣ
ಮಂಗಳೂರು, ಜೂ.21: ಪ್ರಸ್ತುತ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪ್ರಮುಖ ಬಿಲ್ಡರ್‍ಗಳಲ್ಲಿ ಒಂದಾಗಿರುವ, ಅತ್ಯಾಧುನಿಕ ರಚನೆಗಳ, ಅಗ್ರಗಣ್ಯ ಕಟ್ಟಡಗಳ ಕೊಡುಗೆಗಳನ್ನು ನೀಡಿದ ವೆಸ್ಟ್ ಲೈನ್ ಬಿಲ್ಡರ್ಸ್ ಇದೀಗ ‘ವೆಸ್ಟ್ ಲೈನ್ ಸಿಗ್ನೇಚರ್’ ಎಂಬ ತನ್ನ ಪ್ರಮುಖ ಯೋಜನೆಯ ನಿರ್ಮಾಣದಲ್ಲಿ ತೊಡಗಿದೆ.
ಮಂಗಳೂರಿನ ನಂತೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ‘ವೆಸ್ಟ್ ಲೈನ್ ಸಿಗ್ನೇಚರ್’ ದಕ್ಷಿಣ ಭಾರತದಲ್ಲೇ ಪ್ರಸ್ತುತ ಅತೀ ಎತ್ತರದ ಕಟ್ಟಡವಾಗಲಿದೆ. ಅನೇಕ ಪ್ರಸಿದ್ಧ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಸಲಹೆಗಾರರಿಂದ ವಿನ್ಯಾಸಗೊಳಿಸಿದ ಅಲ್ಟ್ರಾ ಪ್ರೀಮಿಯಂ ವಸತಿ ಕಟ್ಟಡವು ಹೊಸದಾಗಿ ಸ್ಥಾಪಿಸಲಾದ ಮೆಗಾ ಫೌಂಡೇಶನ್ ನೊಂದಿಗೆ ನಿರ್ಮಾಣಗೊಳ್ಳಲಿದೆ.
ವಿಶಿಷ್ಟವಾದ ಹಾಗೂ ಬೃಹತ್ ಅಡಿಪಾಯವನ್ನು ಒಂದು ತಿಂಗಳ ಕಡಿಮೆ ಅವಧಿಯಲ್ಲಿ ನಿರ್ಮಿಸಲಾಗಿದೆ. ನಿರ್ಮಾಣ ಕ್ಷೇತ್ರದಲ್ಲಿನ ನವೀನ ತಂತ್ರಜ್ಞಾನಗಳನ್ನು ಅನುಷ್ಠಾನಗೊಳಿಸಿ ವೆಸ್ಟ್ ಲೈನ್ ಬಿಲ್ಡರ್ಸ್, ನಿರ್ಮಾಣ ಸಂಸ್ಥೆ ಎಂ ಫಾರ್, ಆರ್ಕಿಟೆಕ್ಟ್ ಗುಲ್ಶನ್ ರಾಯ್, ಸೈಟ್ ಕಾನ್ಸೆಪ್ಟ್ಸ್ ಸಿಂಗಾಪುರ್, ರ್ಯಾಲೀಸ್, ಫೈರ್ ಆ್ಯಂಡ್ ಎಚ್‍ವಿಎಸಿ ಕನ್ಸಲ್ಟೆಂಟ್ಸ್ ಹಾಗೂ ವಿಂಟಗ್ರೊ ಇಂಜಿನಿಯರಿಂಗ್ ಮುಂತಾದವರು ಒಟ್ಟಾಗಿ ಈ ಕಟ್ಟಡದ ನಿರ್ಮಾಣದಲ್ಲಿ ತೊಡಗಿದ್ದಾರೆ.
ನಿರ್ಮಾಣ ಉದ್ಯಮದಲ್ಲಿ ‘ರಾಫ್ಟ್ ಫೌಂಡೇಶನ್’ ಎಂದು ಕರೆಯಲ್ಪಡುವ ಅಡಿಪಾಯವನ್ನು ಶೀಘ್ರಗತಿಯಲ್ಲಿ ನಿರ್ಮಿಸಲಾಗಿದೆ. ಸುಮಾರು 505 ಟನ್‍ಗಳಷ್ಟು ಉಕ್ಕಿನೊಂದಿಗೆ, ಎಂ 40 ದರ್ಜೆಯ ಸುಮಾರು 2,600 ಕ್ಯೂಬಿಕ್ ಮೀಟರ್ ಕಾಂಕ್ರಿಟ್‍ನೊಂದಿಗೆ 24,000 ಚೀಲಗಳಷ್ಟು ಸಿಮೆಂಟನ್ನು ಅಡಿಪಾಯಕ್ಕೆ ಬಳಸಲಾಗಿದೆ. ಜೆಎಸ್‍ಡಬ್ಲ್ಯೂ ಎಫ್‍ಇ500ಡಿ ಉತ್ತಮ ಗುಣಮಟ್ಟದ ಉಕ್ಕಿನ ಬಳಕೆಯನ್ನು ಪೂರೈಸಲಾಗಿದೆ.
ಫ್ಯಾಬ್ರಿಕೇಶನ್ ಕಾರ್ಯವು ಎರಡು ತಾಣಗಳಲ್ಲಿ ಮಾಡಲಾಗಿದೆ. ಎರಡು ಸೈಟ್ ಇಂಜಿನಿಯರ್‍ಗಳು, ಆರು ಸೈಟ್ ಮೇಲ್ವಿಚಾರಕರು, ಇಬ್ಬರು ಕ್ವಾಲಿಟಿ ಇಂಜಿನಿಯರ್‍ಗಳು, ಇಬ್ಬರು ಸೇಫ್ಟಿ ಇಂಜಿನಿಯರ್‍ಗಳು ಹಾಗೂ ನಾಲ್ಕು ಮೆಕ್ಯಾನಿಕಲ್ ಮೇಲ್ವಿಚಾರಕರು, 100ಕ್ಕೂ ಮಿಕ್ಕಿ ಕಾರ್ಮಿಕರನ್ನು ಒಳಗೊಂಡ ತಂಡವು 2 ಪಾಳಿಗಳಲ್ಲಿ ಸಂಪೂರ್ಣ ಅಡಿಪಾಯ ಕಾರ್ಯವನ್ನು ನಿರ್ವಹಿಸಿದೆ. ಸಾಂಘ್ವಿ ಅಸೋಸಿಯೇಟ್ಸ್‍ನ ಸ್ಟ್ರಕ್ಚರಲ್ ಇಂಜಿನಿಯರ್ ಪೂರ್ಣ ಸಮಯದಲ್ಲಿ ಮೇಲ್ವಿಚಾರಣೆ ನಡೆಸಿದ್ದಾರೆ. ಅಡಿಪಾಯದ ಕೆಳಭಾಗದಲ್ಲಿ ಹಾಗೂ ಸುತ್ತಮುತ್ತ ಆ್ಯಂಟಿ-ಟರ್ಮಿನೈಟ್ ಟ್ರೀಟ್‍ಮೆಂಟ್ ಅನ್ನು ಮಾಡಿಸಲಾಗಿದೆ.
ವೆಸ್ಟ್ ಲೈನ್ ಸಿಗ್ನೇಚರ್, ಆರೋಗ್ಯಕರ ವಾಟರ್ ಕೂಲ್ಡ್ ಶೈತ್ಯ ಕೇಂದ್ರ ಏರ್‍ಕಂಡೀಶನಿಂಗ್ ಸಿಸ್ಟಮ್ ಅಳವಡಿಸಲಿರುವ ನಗರದ ಪ್ರಥಮ ಕಟ್ಟಡವಾಗಲಿದೆ. ಈ ಕಟ್ಟಡವು ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‍ನಿಂದ ಪ್ಲಾಟಿನಂ ನೋಂದಾಯಿತಗೊಂಡಿದೆ. ಸ್ವಯಂಚಾಲಿತ ಕಟ್ಟಡ ನಿರ್ವಹಣೆ ವ್ಯವಸ್ಥೆಯು ಮತ್ತೊಂದು ವಿಶಿಷ್ಟತೆಯಾಗಿದೆ. ರೂಫ್‍ಟಾಪ್ ಹೆಲ್ತ್ ಕ್ಲಬ್ ಸೌಲಭ್ಯದೊಂದಿಗೆ ನಿವಾಸಿಗಳು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸುತ್ತಮುತ್ತಲ ವೀಕ್ಷಣೆಯನ್ನು ಆನಂದಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಪ್ರಪಂಚದ ಎತ್ತರದ ಕಟ್ಟಡವಾದ ‘ಬುರ್ಜ್ ಖಲೀಫಾ’ದ ಕೆನಡಿಯನ್ ಕನ್ಸಲ್ಟೆಂಟ್ ಸಂಸ್ಥೆಯಾದ ಆರ್‍ಡಬ್ಲ್ಯೂಡಿಐನಿಂದ ಕಟ್ಟಡವು ತನ್ನ ವಿಂಡ್ ಟನೆಲ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ.
ಸುಂದರವಾದ ತೋಟಗಳು, ಸೈಕ್ಲಿಂಗ್ ಟ್ರ್ಯಾಕ್, ವಾಕಿಂಗ್ ಟ್ರ್ಯಾಕ್, ವಿಶ್ರಾಂತಿ ಸ್ಥಳ, ಆಂಫಿಥಿಯೇಟರ್, ಸುಸಜ್ಜಿತ ರೂಫ್‍ಟಾಪ್ ಕ್ಲಬ್‍ಹೌಸ್, ಬಾಸ್ಕೆಟ್‍ಬಾಲ್ ಕೋರ್ಟ್, ಬಾಡ್ಮಿಂಟನ್ ಕೋರ್ಟ್, ವಿಶಾಲ ಒಳಾಂಗಣ ಆಟಗಳ ಕೊಠಡಿ, ಪಾರ್ಟಿ ಹಾಲ್, ರೂಫ್‍ಟಾಪ್ ಈಜುಕೊಳ, ಮಕ್ಕಳಿಗೆ ವೇಡ್‍ಪೂಲ್, ಪೂಲ್ ಥಿಯೇಟರ್, ಜಾಕುಝಿ, ಸೋನಾ, ಆಯುರ್ವೇದ ಮಸಾಜ್ ಕೊಠಡಿ, ಅತ್ಯಾಧುನಿಕ ಜಿಮ್ನಾಷಿಯಂ, ಮಿನಿ ಥಿಯೆಟರ್ ಮತ್ತು ಗ್ರಂಥಾಲಯ ಮುಂತಾದ ವಿಶಿಷ್ಟ ಜೀವನಶೈಲಿಯನ್ನು ವೆಸ್ಟ್ ಲೈನ್ ಬಿಲ್ಡರ್ಸ್ ಈ ಕಟ್ಟಡದ ನಿವಾಸಿಗಳಿಗೆ ನೀಡುತ್ತಿದೆ.
ಹೆಚ್ಚಿನ ಮಾಹಿತಿಗಾಗಿ www.westlinebuilders.com/signature ಜಾಲತಾಣವನ್ನು ಸಂಪರ್ಕಿಸಬಹುದಾಗಿದೆ.