ಕೊಂಕಣಿ ಶಿಕ್ಷಕರಿಗೆ ಗೌರವ ಸಂಭಾವನೆ
Update: 2017-06-21 15:51 IST
ಮಂಗಳೂರು, ಜೂ.21: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯು ಪ್ರಸುತ್ತ ಸಾಲಿನಿಂದ 5 ರಿಂದ 10ನೆ ತರಗತಿಯವರೆಗೆ ಕನಿಷ್ಠ ವಿದ್ಯಾರ್ಥಿ ಸಂಖ್ಯೆಯೊಂದಿಗೆ ಅಧಿಕೃತವಾಗಿ ತೃತೀಯ ಭಾಷೆಯಾಗಿ ಕೊಂಕಣಿಯನ್ನು ಬೋಧಿಸುವ ಶಾಲೆಗಳಿಗೆ ಮಾಸಿಕ ಸಂಭಾವನೆಯೊಂದಿಗೆ ಶಿಕ್ಷಕರ ಸೌಲಭ್ಯ ನೀಡುವ ಯೋಜನೆಯನ್ನು ಹಾಕಿಕೊಂಡಿದೆ.
ಆಸಕ್ತ ಶಾಲೆಗಳ ಮುಖ್ಯಸ್ಥರು ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ, ಮಂಗಳೂರು ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಬಾಗ್, ಮಂಗಳೂರು-575003. (ದೂ.ಸಂ: 0824-2453167 ಅಥವಾ ಮೊ.ಸಂ: ಸಂಖ್ಯೆ 9449236844 )ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.