ಆತ್ಮ ಶುದ್ಧಿಯಿಲ್ಲದ ಇಬಾದತುಗಳು ನಿಷ್ಫಲ: ಹಸನ್ ಮುಬಾರಕ್ ಸಖಾಫಿ

Update: 2017-06-21 10:38 GMT

ಮಂಗಳೂರು, ಜೂ.21: ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಪವಿತ್ರ ರಂಝಾನ್ ತಿಂಗಳಲ್ಲಿ ಬದುಕು ಧನ್ಯಗೊಳಿಸುವ ಸಲುವಾಗಿ ತಝ್ಕಿಯತ್ ನೈಟ್ ಕಾರ್ಯಕ್ರಮ ಉಳ್ಳಾಲದ ಮಂಚಿಲ ಜುಮಾ ಮಸೀದಿಯಲ್ಲಿ ನಡೆಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಮಂಚಿಲ ಜುಮಾ ಮಸೀದಿಯ ಖತೀಬರಾದ ಹಸನ್ ಮುಬಾರಕ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆತ್ಮ ಸಂಶುದ್ಧವಾಗಿದ್ದರೆ ಮಾತ್ರ ಮುಸ್ಲಿಮನ ಸರ್ವ ಇಬಾದತುಗಳು ಸ್ವೀಕಾರ್ಹ ಯೋಗ್ಯವಾಗಲು ಸಾಧ್ಯ. ಆತ್ಮ ಶುದ್ಧಿಯಿಲ್ಲದೆ ನಿರ್ವಹಿಸಲ್ಪಡುವ ಇಬಾದತುಗಳು ನಿಷ್ಫಲ ಅಂದರು.

ಚೊಂಬುಗುಡ್ಡೆ ಜುಮಾ ಮಸೀದಿಯ ಖತೀಬರಾದ ಹಂಝ ಮದನಿ ಗುರುವಾಯನಕೆರೆ ಆತ್ಮ ಶುದ್ಧೀಕರಣ ಹಾಗು ಆತ್ಮದೊಂದಿಗೆ ಸಂಬಂಧವಿರುವ ಅಂಗಗಳ ಸಂಸ್ಕರಣೆ ಮಾಡುವುದು ಹೇಗೆ ಎಂಬ ವಿಷಯದಲ್ಲಿ ತರಗತಿ ನಡೆಸಿದರು.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಙಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಭಾಗವಾಗಿ ಖತ್ಮುಲ್ ಕುರಾನ್ ಇಜ್ತಿಮಾ, ತಹ್ಲೀಲ್ ಮಜ್ಲಿಸ್ ಹಾಗು ಪ್ರಾರ್ಥನಾ ಸಂಗಮ ನಡೆಯಿತು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ಅಧ್ಯಕ್ಷರಾದ ಇಲ್ಯಾಸ್ ಸಖಾಫಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಙಳ್, ಸೆಂಟರ್ ಕೋಶಾಧಿಕಾರಿ ಇಸಾಕ್ ಪೇಟೆ, ತೊಕ್ಕೋಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಅಳೇಕಲ, ಸಿರಾಜ್ ಉಸ್ತಾದ್ ಚಾಲಿಯಂ, ಶಮೀರ್ ಸೇವಂತಿಗುಡ್ಡೆ, ಎಸ್ ವೈ ಎಸ್ ಸೆಂಟರ್ ಜೊತೆ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಸೆಂಟರ್ ಉಪಾಧ್ಯಕ್ಷ ಹೈದರ್ ಮುಕ್ಕಚ್ಚೇರಿ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯ ಸಯೀದ್ ಮಂಚಿಲ, ಉಳ್ಳಾಲ ಸೆಕ್ಟರ್ ಕೋಶಾಧಿಕಾರಿ ಶಬೀರ್ ಪೇಟೆ ಹಾಗು ಇನ್ನಿತರ ಎಸ್ ವೈ ಎಸ್, ಎಸ್ಸೆಸ್ಸೆಫ್ ಗಣ್ಯರು ಉಪಸ್ಥಿತರಿದ್ದರು.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಸ್ವಾಗತಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ.ಜಿ ಹನೀಫ್ ಹಾಜಿ ಧನ್ಯವಾದಗೈದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗ ಚೇಯರ್ ಮಾನ್ ಅಲ್ತಾಫ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News