ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನ ದಶಮಾನೋತ್ಸವ
Update: 2017-06-21 17:42 IST
ಮಂಗಳೂರು, ಜೂ.21: ನಗರದ ಮೇರಿಹಿಲ್‌ನಲ್ಲಿರುವ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನ ದಶಮಾನೋತ್ಸವದ ಸಂಭ್ರಮ ನಡೆಯಿತು.
ಈ ಸಂದರ್ಭ ಡಾ. ಒಲಿಯಾ ಎ.ಸಿ., ಭ. ಸಿಲ್ವಿಯನ್, ಮರಿಯಾ ಜ್ಯೋತಿ, ಕರಿಸ್ಸಿಮಾ, ಅನಂತೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಮೆಲಿಸ್ಸಾ ಸ್ವಾಗತಿಸಿದರು. ಸಂಭ್ರಮದ ಸಲುವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಶಾಲೆಯ 10ನೇ ಮಂತ್ರಿಮಂಡಲ ರಚನೆ ಹಾಗೂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.