ಮಂಗಳೂರು ವಿವಿಯಲ್ಲಿ ಯೋಗ ದಿನಾಚರಣೆ

Update: 2017-06-21 12:19 GMT

ಮಂಗಳೂರು,ಜೂ.21: ಯೋಗವು ನಮ್ಮ ಮನಸ್ಸನ್ನು ನಿಯಂತ್ರಿಸುವುದರೊಂದಿಗೆ ಒತ್ತಡ ಮುಕ್ತ ಜೀವನ ನಡೆಸಲು ಸಹಕಾರಿಯಾಗಿದೆ. ಯೋಗವು ಸಂಪ್ರದಾಯದಿಂದ ಬಂದ ಕಲೆ ಎಂದೇ ತಿಳಿದು ಮುಂದುವರಿಯುತ್ತಿತ್ತು. ಇದರಿಂದಾಗಿ ಸ್ವಾತಂತ್ರ ಬಂದ ನಂತರವೂ ಯೋಗದ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ನಡೆದಿರಲಿಲ್ಲ. ಬಳಿಕ ಯೋಗದ ಬಗ್ಗೆ ಬಹಳಷ್ಟು ಅಧ್ಯಯನ ನಡೆದು ಸಂಶೋಧನೆಗಳೂ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಅವರು ಅಭಿಪ್ರಾಯಪಟ್ಟರು.

ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕೊನೆಗಯಲ್ಲಿ ಸಮಾರಂಭದಲ್ಲಿ ಸಾಧನೆ ಮಾಡಿದ ಇಬ್ಬರು ಯೋಗಪಟುಗಳನ್ನು ಸನ್ಮಾನಿಸಲಾಯಿತು.   
   
 

   
   
 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News