×
Ad

ಯೋಗ ಕೇಂದ್ರದಲ್ಲಿ ಯೋಗ ದಿನಾಚರಣೆ

Update: 2017-06-21 20:34 IST

ಪುತ್ತೂರು, ಜೂ.21: ಯೋಗಕೇಂದ್ರ ಪುತ್ತೂರು ಇದರ ವತಿಯಿಂದ ವಿಶ್ವಯೋಗ ದಿನಾಚರಣೆ ಸಾಮೂಹಿಕ ಯೋಗಾಭ್ಯಾಸ ಮತ್ತು ಯೋಗ ಪ್ರದರ್ಶನ ಗುರುವಾರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಂಚಾಕ್ಷರಿ ಮಂಟಪದಲ್ಲಿ ನಡೆಯಿತು.

ಬೆಳಿಗ್ಗೆ ಗಂಟೆ 5.30ಕ್ಕೆ ಪ್ರಾರಂಭಗೊಂಡ ಯೋಗ ಕಾರ್ಯಕ್ರಮದಲ್ಲಿ ಸಾಮೂಹಿಕ ಯೋಗಾಭ್ಯಾಸ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.

ಬಳಿಕ ದೇವಳದ ವಠಾರವನ್ನು ಶುಚಿತ್ವಗೊಳಿಸಿ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ದೇವಳದ ವಠಾರದಲ್ಲಿ ಕಳೆದ ವರ್ಷ ನೆಟ್ಟಿರುವ ಗಿಡಗಳ ನಿರ್ವಹಣೆ ಮಾಡಲಾಯಿತು. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಮತ್ತು ಮಾಜಿ ಸುಬೇದಾರ್ ರಮೇಶ್ ಬಾಬು ಯೋಗಾಭ್ಯಾಸ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಗತಿ ವಿದ್ಯಾಸಂಸ್ಥೆಯ ರಾಷ್ಟ್ರಮಟ್ಟದ ಯೋಗ ಸಾಧಕ ವಿದ್ಯಾರ್ಥಿಗಳಾದ ಅಶೀಶ್ ಮತ್ತು ಅಶ್ವಥ್ ಹಾಗೂ ಯೋಗಕೇಂದ್ರ ಪುತ್ತೂರಿನ ಸದಸ್ಯರಾದ ಕಿಶೋರ್ ಕುಮಾರ್ ಮತ್ತು ಅದಿತ್ ಕೊಳಕೆಮಾರ್‌ರವರು ವೇದಿಕೆಯಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು. ಓಂ ಕಾರದೊಂದಿಗೆ ಯೋಗ ಪ್ರಾರಂಭಗೊಂಡಿತ್ತು. ಯೋಗ ಕೇಂದ್ರ ಪುತ್ತೂರು ಇದರ ಅಧ್ಯಕ್ಷ ನ್ಯಾಯವಾದಿ ೀಗಿರೀಶ್ ಮಳಿ ಯೋಗಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ವಿವಿಧ ಭಂಗಿಗಳ ಯೋಗದ ಕುರಿತು ಮಾರ್ಗದರ್ಶನ ನೀಡಿದರು. ಅನುಷಾರವರು ಪ್ರಾರ್ಥಿಸಿದರು. ನೂರಾರು ಮಂದಿ ಸಭಾಂಗಣದಲ್ಲಿ ಯೋಗಾಭ್ಯಾಸ ಮಾಡಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News