ದಕ್ಷಿಣ ಸುಡಾನ್: 20 ಲಕ್ಷ ಮಂದಿ ಹಸಿವಿನ ಅಂಚಿನಲ್ಲಿ

Update: 2017-06-21 15:14 GMT

ಜುಬ (ದಕ್ಷಿಣ ಸುಡಾನ್), ಜೂ. 21: ದಕ್ಷಿಣ ಸುಡಾನ್‌ನಲ್ಲಿ ಈಗ ಬರಗಾಲವಿಲ್ಲ, ಆದರೆ ಸುಮಾರು 20 ಲಕ್ಷ ಜನರು ಹಸಿವೆಯ ಹೊಸ್ತಿಲಲ್ಲಿದ್ದಾರೆ ಹಾಗೂ ಸುಮಾರು 60 ಲಕ್ಷ ಮಂದಿ (ಒಟ್ಟು ಜನಸಂಖ್ಯೆಯ ಅರ್ಧದಷ್ಟು) ಜೂನ್ ಮತ್ತು ಜುಲೈ ಅವಧಿಯಲ್ಲಿ ತೀವ್ರ ಆಹಾರ ಅಭದ್ರತೆಯನ್ನು ಎದುರಿಸಲಿದ್ದಾರೆ ಎಂದು ಸರಕಾರ ಮತ್ತು ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿದ ವರದಿಗಳು ಹೇಳಿವೆ.

 ಪರಿಸ್ಥಿತಿ ಗಂಭೀರವಾಗಿದೆ ಎಂದು ದಕ್ಷಿಣ ಸುಡಾನ್‌ನ ನ್ಯಾಶನಲ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್‌ನ ವರದಿಗಳು ಮತ್ತು ವಿಶ್ವಸಂಸ್ಥೆಯ ಪರಿಷ್ಕರಿತ ಆಹಾರ ಮತ್ತು ಭದ್ರತೆ ವಿಶ್ಲೇಷಣೆ ತಿಳಿಸಿದೆ.

‘‘ಜನರು ಭಯಾನಕ ಪರಿಸ್ಥಿತಿಯಲ್ಲಿದ್ದಾರೆ’’ ಎಂದು ಆಹಾರ ಮತ್ತು ಕೃಷಿ ಸಂಘಟನೆಯ ಸರ್ಜ್ ಟಿಸಾಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News