ಪ್ರಕಾಶ್ ಕೊಡವೂರುಗೆ ಸಿಜಿಕೆ ಪ್ರಶಸ್ತಿ
ಮುದ್ರಾಡಿ, ಜೂ.21: ಸಂಸ ಥೇಟರ್ ಬೆಂಗಳೂರು ಹಾಗೂ ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ಇವರು ಜಂಟಿಯಾಗಿ ಖ್ಯಾತ ರಂಗಕರ್ಮಿ ಸಿಜಿಕೆ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಉಡುಪಿಯ ರಂಗಕರ್ಮಿ, ಸಂಘಟಕ, ಕಲಾಪೋಷಕ ಪ್ರಕಾಶ್ ಜಿ.ಕೊಡವೂರು ಆಯ್ಕೆಯಾಗಿದ್ದಾರೆ.
ಉಡುಪಿ ಬನ್ನಂಜೆಯ ಶ್ರೀ ನಾರಾಯಣಗುರು ಸಭಾಭವನದಲ್ಲಿ ಜೂ.27ರ ಮಂಗಳವಾರ ಸಂಜೆ 6:00 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ರಂಗಭೂಮಿಯಲ್ಲಿ ಕ್ರಿಯಾತ್ಮಕವಾಗಿ ಗುರುತಿಸಿಕೊಂಡು, ಕಲಾಭೂಮಿಕೆಯ ಉನ್ನತಿಗೆ ಅವಿರತ ಶ್ರಮಿಸಿದ್ದ ಹಿರಿಯ ರಂಗ ಚೇತನ ಸಿ.ಜಿ.ಕೃಷ್ಣಸ್ವಾಮಿ ನೆನಪಿನಲ್ಲಿ ಪ್ರತಿವರ್ಷ ನೀಡಲಾಗುವ ಪ್ರಶಸ್ತಿಗೆ ಈ ಬಾರಿ ಆಯ್ಕೆಯಾಗಿರುವ ಪ್ರಕಾಶ್ ಜಿ.ಕೊಡವೂರು ಯಕ್ಷಗಾನ, ನಾಟಕಗಳಲ್ಲಿ ಹವ್ಯಾಸಿ ಕಲಾವಿದರಾಗಿ ಗುರುತಿಸಿ ಕೊಂಡಿದ್ದಾರೆ.
ಸುಮನಸಾ ಕೊಡವೂರು ಸಂಸ್ಥೆಯ ಸಂಸ್ಥಾಪಕರಾಗಿ, ಈ ಸಂಘಟನೆ ಸೃಜನಶೀಲವಾಗಿ ಬೆಳೆಯುವಲ್ಲಿ ಶ್ರಮಿಸುತ್ತಿದ್ದಾರೆ. ರಂಗೂಮಿಯಲ್ಲಿಕ್ರಿಯಾತ್ಮಕವಾಗಿಗುರುತಿಸಿಕೊಂಡು,ಕಲಾೂಮಿಕೆಯ ಉನ್ನತಿಗೆ ಅವಿರತ ಶ್ರಮಿಸಿದ್ದ ಹಿರಿಯ ರಂಗ ಚೇತನ ಸಿ.ಜಿ.ಕೃಷ್ಣಸ್ವಾಮಿ ನೆನಪಿನಲ್ಲಿ ಪ್ರತಿವರ್ಷ ನೀಡಲಾಗುವ ಪ್ರಶಸ್ತಿಗೆ ಈ ಬಾರಿ ಆಯ್ಕೆಯಾಗಿರುವ ಪ್ರಕಾಶ್ ಜಿ.ಕೊಡವೂರು ಯಕ್ಷಗಾನ, ನಾಟಕಗಳಲ್ಲಿ ಹವ್ಯಾಸಿ ಕಲಾವಿದರಾಗಿ ಗುರುತಿಸಿ ಕೊಂಡಿದ್ದಾರೆ.
ಸುಮನಸಾ ಕೊಡವೂರು ಸಂಸ್ಥೆಯ ಸಂಸ್ಥಾಪಕರಾಗಿ, ಈ ಸಂಘಟನೆ ಸೃಜನಶೀಲವಾಗಿ ಬೆಳೆಯುವಲ್ಲಿ ಶ್ರಮಿಸುತ್ತಿದ್ದಾರೆ. 27ರಂದು ಹಿರಿಯ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿರುವರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ.ಗೋಪಾಲ ಭಂಡಾರಿ ವಹಿಸುವರು. ಮುಖ್ಯಅತಿಥಿಯಾಗಿ ರಂಗಕರ್ಮಿ ರಾಮ್ ಶೆಟ್ಟಿ ಹಾರಾಡಿ ಉಪಸ್ಥಿತರಿರುವರು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.