ವಿದ್ಯಾರ್ಥಿ ಆತ್ಮಹತ್ಯೆ
Update: 2017-06-21 21:27 IST
ಮಣಿಪಾಲ, ಜೂ.21: ಇಲ್ಲಿನ ವಿಎಂ ನಗರದ ಆಶ್ರಮದಲ್ಲಿದ್ದ ವಿದ್ಯಾರ್ಥಿಯೊಬ್ಬ ವೈಯಕ್ತಿಕ ಕಾರಣದಿಂದ ಮನನೊಂದು ಮರಣ ಪತ್ರ ಬರೆದಿಟ್ಟು ಜೂ.20ರಂದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಮೃತರನ್ನು ಕೊಪ್ಪಳದ ಕಲ್ಲಪ್ಪ ಹಾಗೂ ಲೀಲಾವತಿ ದಂಪತಿ ಪುತ್ರ ನಾಗರಾಜ್ ಎಂದು ಗುರುತಿಸಲಾಗಿದೆ. ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ ಬಳಿಕ ಉಡುಪಿಯ ಬೈಲೂರು ಕೊಳಂಬೆಯ ರಾಧಾ ಕಾಮತ್ ಎಂಬವರ ಅಲೆವೂರು ರಾಮನಾಥ ಲಕ್ಷ್ಮಣ ಶೆಣೈ ಚಾರಿ ಟೇಬಲ್ ಟ್ರಸ್ಟ್‌ನ ಶಾಂತಿ ನಿಕೇತನ ಆಶ್ರಮದಲ್ಲಿ ವಾಸವಾಗಿದ್ದ ಇವರು, ಆಶ್ರಮದ ಒಳಗೆ ಛಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.