×
Ad

ಅಂಬೇಡ್ಕರ್ ಭಾವಚಿತ್ರ ವಿರೂಪ: ದೂರು

Update: 2017-06-21 21:30 IST

ಬೈಂದೂರು, ಜೂ.21: ಉಪ್ಪುಂದ ಗ್ರಾಮದ ಸರಕಾರಿ ಸ್ಥಳದಲ್ಲಿ ಅಳವಡಿಸ ಲಾದ ಪ್ರಕಟಣಾ ಫಲಕವನ್ನು ಹರಿದು ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿ ಸಿರುವ ಘಟನೆ ನಡೆದಿದೆ.

ಗ್ರಾಪಂ ನಿರ್ಣಯದಂತೆ ಅಂಬೇಡ್ಕರ್ ಭವನ ನಿರ್ಮಿಸಲು ಕಾಯ್ದಿರಿಸಿದ ಉಪ್ಪುಂದ ಗ್ರಾಮದ ಸರಕಾರಿ ಸ್ಥಳದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಪಂ ಪರವಾನಿಗೆಯೊಂದಿಗೆ ಮೇ 5ರಂದು ಅಂಬೇಡ್ಕರ್ ಭಾವಚಿತ್ರವಿರುವ ಪ್ರಕಟನಾ ಫಲಕವನ್ನು ಅಳವಡಿಸಿತ್ತು.

ಜೂ.18ರಂದು ಸಂಜೆ 6:30ರ ಸುಮಾರಿಗೆ ನಂದನವನ ಗ್ರಾಮದ ರಾಜೀವ ಭಟ್ ಎಂಬವರು ಅಂಬೇಡ್ಕರ್ ಭಾವಚಿತ್ರವಿರುವ ಪ್ರಕಟನಾ ಫಲಕವನ್ನು ಹರಿದು ಹಾಕಿ ಅಂಬೇಡ್ಕರರ ಭಾವಚಿತ್ರವನ್ನು ವಿರೂಪಗೊಳಿಸಿರುವುದಾಗಿ ಉಪ್ಪುಂದ ಫಿಶರೀಸ್ ಕಾಲೋನಿಯ ನಾಗರಾಜ ಎಂಬವರು ನೀಡಿದ ದೂರಿ ನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News